ಭಾರತ, ಮೇ 15 -- ಮೊದಲೆಲ್ಲ ವೀಕೆಂಡ್‌ ಬಂತೆಂದರೆ ಚಿತ್ರಮಂದಿರಗಳಲ್ಲಿ ಯಾವೆಲ್ಲ ಸಿನಿಮಾಗಳು ಬಿಡುಗಡೆಯಾಗುತ್ತವೆ ಎಂದು ಜನರು ಕುತೂಹಲದಿಂದಕ ಕಾಯುತ್ತಿದ್ದರು. ಈಗ ಥಿಯೇಟರ್‌ಗಳ ಜತೆ ಒಟಿಟಿ ಬಿಡುಗಡೆ ಕುರಿತು ಜನರು ಹೆಚ್ಚು ಕುತೂಹಲದಿಂದ ಕಾಯುತ್ತಿದ್ದಾರೆ. ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಮ್‌ ವಿಡಿಯೋ, ಒಟಿಟಿ ಪ್ಲೇ, ಜೀ5, ಜಿಯೋಹಾಟ್‌ಸ್ಟಾರ್‌, ಸೋನಿಲಿವ್‌, ಆಪಲ್‌ಟಿವಿ ಸೇರಿದಂತೆ ಹಲವು ಒಟಿಟಿಗಳಲ್ಲಿ ಯಾವ ಸಿನಿಮಾ ಅಥವಾ ಸರಣಿ ಬಿಡುಗಡೆಯಾಗುತ್ತಿದೆ ಎಂದು ಜನರು ಕಾಯುತ್ತಿರುತ್ತಾರೆ. ಈ ರೀತಿ ನಿರೀಕ್ಷೆಯಲ್ಲಿರುವವರಿಗೆ ಈ ವಾರ ನಿರಾಶೆಯಾಗದು. ಭೂಲ್ ಚುಕ್ ಮಾಫ್ , ಡಿಯರ್ ಹಾಂಗ್‌ರಾಂಗ್, ಮರಣಮಾಸ್‌ ಸೇರಿದಂತೆ ಹಲವು ಸಿನಿಮಾಗಳು, ವೆಬ್‌ಸರಣಿಗಳು ಈ ವಾರ ಬಿಡುಗಡೆಯಾಗಲಿವೆ.

ರಾಜ್‌ಕುಮಾರ್ ರಾವ್ ಮತ್ತು ವಾಮಿಕಾ ಗಬ್ಬಿ ನಟಿಸಿರುವ ಭೂಲ್ ಚುಕ್ ಮಾಫ್ ಈ ವಾರ ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ರಿಲೀಸ್‌ ಆಗುತ್ತಿದೆ. ಇದು ಕರಣ್ ಶರ್ಮಾ ನಿರ್ದೇಶನದ ವೈಜ್ಞಾನಿಕ ಕಾದಂಬರಿ ಹಾಸ್ಯ ಚಿತ್ರವಾಗಿದೆ. ಮ್ಯಾಡಾಕ್ ಫಿಲ್ಮ್ಸ್ ...