Bengaluru, ಏಪ್ರಿಲ್ 21 -- ಈ ವಾರ ಸಾಲು ಸಾಲು ಬ್ಲಾಕ್‌ಬಸ್ಟರ್‌ ಹಿಟ್‌ ಸಿನಿಮಾಗಳು ಒಟಿಟಿಗೆ ಬರಲು ಸಜ್ಜಾಗಿವೆ. ಅವುಗಳಲ್ಲಿ ಈ ಆರು ಸಿನಿಮಾಗಳು ತುಂಬಾ ಸ್ಪೆಷಲ್. ಮಲಯಾಳಂ ಚಿತ್ರರಂಗದ ಅತಿ ದೊಡ್ಡ ಬ್ಲಾಕ್‌ಬಸ್ಟರ್ ಆಗಿರುವ ʻಎಲ್‌2; ಎಂಪುರಾನ್‌ʼ ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಪ್ರೇಕ್ಷಕರಿಂದ ಮೆಚ್ಚುಗೆ ಪಡೆದ ಚಿಯಾನ್ ವಿಕ್ರಮ್ ನಟನೆಯ ಚಿತ್ರವೂ ಸಹ ಸ್ಟ್ರೀಮಿಂಗ್‌ಗೆ ಬರಲಿದೆ. ಈ ವಾರ ಒಟಿಟಿ ಅಂಗಳ ಪ್ರವೇಶಿಸಲಿರುವ ಟಾಪ್ 6 ಸಿನಿಮಾಗಳ ವಿವರ ಹೀಗಿದೆ.

ಮಲಯಾಳಂ ಸ್ಟಾರ್ ನಟ ಮೋಹನ್‌ಲಾಲ್ ಮತ್ತು ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಎಲ್‌2; ಎಂಪುರಾನ್‌ ಸಿನಿಮಾ ಈ ಗುರುವಾರ, ಏಪ್ರಿಲ್ 24 ರಂದು ಜಿಯೋ ಹಾಟ್‌ಸ್ಟಾರ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ಈ ಚಿತ್ರಕ್ಕೆ ಪೃಥ್ವಿರಾಜ್ ನಿರ್ದೇಶನ ಮಾಡಿದ್ದಾರೆ. ಈ ಆಕ್ಷನ್ ಥ್ರಿಲ್ಲರ್ ಚಿತ್ರವು ಮಲಯಾಳಂ ಜೊತೆಗೆ ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿಯೂ ಏಪ್ರಿಲ್ 24 ರಂದು ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಲಿದೆ. ಲ...