Bengaluru, ಏಪ್ರಿಲ್ 16 -- OTT Malayalam Movies: ಈ ವಾರ ಯಾವೆಲ್ಲ ಹೊಸ ಹೊಸ ಮಲಯಾಳಂ ಸಿನಿಮಾಗಳು ಒಟಿಟಿಯಲ್ಲಿ ಬಿಡುಗಡೆ ಆಗಲಿವೆ ಎಂದು ಒಟಿಟಿ ವೀಕ್ಷಕರು ಕಾಯುತ್ತಿದ್ದಾರೆ. ಅಂಥವರಿಗಾಗಿ ಈ ವಾರ ಎರಡು ಮಲಯಾಳಂ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಒಂದು ಆ್ಯಕ್ಷನ್ ಸಿನಿಮಾ, ಇನ್ನೊಂದು ಕಾಮಿಡಿ ಡ್ರಾಮಾ ಶೈಲಿಯ ಚಿತ್ರ. ಆ ಎರಡು ಸಿನಿಮಾಗಳು ಯಾವುವು, ಎಲ್ಲಿ ನೋಡಬಹುದು ಎಂಬಿತ್ಯಾದಿ ವಿವರ ಇಲ್ಲಿದೆ.

ಆಂಟನಿ ವರ್ಗೀಸ್ ನಾಯಕನಾಗಿ ನಟಿಸಿರುವ ಆಕ್ಷನ್‌ ಪ್ಯಾಕ್ಡ್‌ ʻದಾವೀದ್ʼ ಸಿನಿಮಾ ಈಗಾಗಲೇ ಚಿತ್ರಮಂದಿಗಳಲ್ಲಿ ಬಿಡುಗಡೆಯಾಗಿದೆ. ಫೆಬ್ರವರಿ 14 ರಂದು ಥಿಯೇಟರ್‌ಗಳಲ್ಲಿ ತೆರೆಕಂಡಿದ್ದ ಈ ಸಿನಿಮಾ ವಿಮರ್ಶೆ ದೃಷ್ಟಿಯಿಂದ ಮೆಚ್ಚುಗೆ ಪಡೆದಿತ್ತು. ಬಾಕ್ಸಿಂಗ್ ಹಿನ್ನೆಲೆಯಲ್ಲಿ ಮೂಡಿಬಂದ ಈ ಸಿನಿಮಾವನ್ನು ಗೋವಿಂದ್ ವಿಷ್ಣು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಇದೇ ಏಪ್ರಿಲ್‌ 18ರಂದು ಜೀ5 ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿದೆ.

ʻದಾವೀದ್ʼ ಸಿನಿಮಾದಲ್ಲಿ ವರ್ಗೀಸ್‌ಗೆ ಜೋಡಿಯಾಗಿ ಲಿಜೋಮೋಲ್ ಜೋಸ್ ನಟಿಸಿದ್ದಾರೆ. ಮೊ...