ಭಾರತ, ಏಪ್ರಿಲ್ 13 -- Easter Sunday 2025: ಯೇಸುಕ್ರಿಸ್ತನು ಪುನರುತ್ಥಾನಗೊಂಡ ದಿನವನ್ನು ವಿಶ್ವದಾದ್ಯಂತದ ಕ್ರೈಸ್ತರು ಈಸ್ಟರ್ ದಿನವೆಂದು ಆಚರಿಸುತ್ತಾರೆ. ಕ್ರಿಸ್ ಮಸ್ ಗಿಂತ ಭಿನ್ನವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈಸ್ಟರ್ ಗೆ ಯಾವುದೇ ನಿಗದಿತ ದಿನಾಂಕವಿಲ್ಲ. ಇದು ವಸಂತಕಾಲದಲ್ಲಿ ಬರುತ್ತದೆ. ಕ್ರಿಸ್ತನ ಶಿಲುಬೆಗೇರಿಸುವಿಕೆ ಮತ್ತು ಸಮಾಧಿಯ ನಂತರದ ಮೂರನೇ ದಿನದಂದು ಗುಡ್ ಫ್ರೈಡೆ ಆಚರಿಸಲಾಗುತ್ತದೆ.

2025ರ ಈಸ್ಟರ್ ಭಾನುವಾರವನ್ನು ಏಪ್ರಿಲ್ 20ರ ಭಾನುವಾರ ಆಚರಿಸಲಾಗುತ್ತದೆ. ಕ್ರಿಶ್ಚಿಯಲ್ ಕ್ಯಾಲೆಂಡರ್ ಪ್ರಕಾರ, ಸಾಮಾನ್ಯವಾಗಿ ಹುಣ್ಣಿಮೆಯ ನಂತರ ಈಸ್ಟರ್ ಭಾನುವಾರವನ್ನು ಆಚರಿಸಲಾಗುತ್ತದೆ. ಏಪ್ರಿಲ್ 12 ರಂದು ಹುಣ್ಣಿಮೆ ಸಂಭವಿಸಿದೆ. ಏಪ್ರಿಲ್ 13 ರಂದು ಅಂದರೆ ಇಂದು ಗರಿಗಳ ಭಾನುವಾರವನ್ನಾಗಿ ಆಚರಿಸಲಾಗಿದೆ. ಇದಾದ ನಂತರ ಈಸ್ಟರ್ ಭಾನುವಾರ ಆಚರಿಸುವ ವಾಡಿಕೆ ಶತಮಾನಗಳಿಂದ ನಡೆದುಕೊಂಡು ಬಂದಿದೆ.

ಯೇಸು ಕ್ರಿಸ್ತನು ಈ ಲೋಕದಲ್ಲಿನ ಪಾಪಿಗಳಾಗಿ ಮರಣಹೊಂದಿ ಮತ್ತೆ ಮೂರನೇ ದಿನ ಜೀವಂತವಾಗಿ ಎದ್ದು ಬಂದಿದ್...