Bengaluru, ಜನವರಿ 31 -- ಮೊಟ್ಟೆಖಾದ್ಯವನ್ನು ಅನೇಕ ಮಂದಿ ಬಹಳ ಇಷ್ಟಪಡುತ್ತಾರೆ. ಮೊಟ್ಟೆ ಆರೋಗ್ಯಕ್ಕೂ ಒಳ್ಳೆಯದು. ಮೊಟ್ಟೆ ಸಾರು, ಗ್ರೇವಿ, ಆಮ್ಲೆಟ್, ಘೀ ರೋಸ್ಟ್ ಇವೆಲ್ಲಾ ಖಾದ್ಯಗಳು ತುಂಬಾ ರುಚಿಕರವಾಗಿರುತ್ತದೆ. ಸ್ವಲ್ಪ ವಿಭಿನ್ನ ರುಚಿ ಹಾಗೂ ಖಾರ ತುಸು ಹೆಚ್ಚು ಬೇಕು ಎಂದೆನಿಸಿದರೆ ಹಸಿಮೆಣಸಿನಕಾಯಿ ಮೊಟ್ಟೆ ಗ್ರೇವಿ ಮಾಡಿ ನೋಡಿ. ಅನ್ನ, ದೋಸೆ, ಚಪಾತಿ ಜೊತೆ ತಿನ್ನಲು ಬಹಳ ರುಚಿಯಾಗಿರುತ್ತದೆ. ಹಸಿಮೆಣಸಿನಕಾಯಿ ಮೊಟ್ಟೆ ಗ್ರೇವಿ ಮಾಡುವುದು ಹೇಗೆ ಎಂಬುದು ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು: ಮೊಟ್ಟೆ- ನಾಲ್ಕು, ಅರಿಶಿನ- ಅರ್ಧ ಚಮಚ, ಈರುಳ್ಳಿ- ಮೂರು, ಹಸಿ ಮೆಣಸಿನಕಾಯಿ- ಆರು, ಶುಂಠಿ- ಒಂದು ಸಣ್ಣ ತುಂಡು, ಬೆಳ್ಳುಳ್ಳಿ- 10, ಉಪ್ಪು ರುಚಿಗೆ ತಕ್ಕಷ್ಟು, ಕೊತ್ತಂಬರಿ ಪುಡಿ- ನಾಲ್ಕು ಚಮಚ, ಎಣ್ಣೆ- ಮೂರು ಚಮಚ, ಬಿರಿಯಾನಿ ಎಲೆ- ಒಂದು, ದಾಲ್ಚಿನ್ನಿ- ಒಂದು ಸಣ್ಣ ತುಂಡು, ಲವಂಗ- ಮೂರು, ಕಾಳುಮೆಣಸು- ಕಾಲು ಚಮಚ, ಏಲಕ್ಕಿ- ಎರಡು, ಜೀರಿಗೆ- ಅರ್ಧ ಚಮಚ, ಅರಿಶಿನ- ¼ ಚಮಚ, ಕೊತ್ತಂಬರಿ ಪುಡಿ- ಒಂದು ಚಮಚ, ಗರಂ ಮಸಾಲ...