ಭಾರತ, ಫೆಬ್ರವರಿ 13 -- ಬೆಂಡೆಕಾಯಿ ಅತ್ಯಂತ ಆರೋಗ್ಯಕರ ಆಹಾರಗಳಲ್ಲಿ ಒಂದಾಗಿದೆ. ಹೀಗಾಗಿ ಇಷ್ಟವಿಲ್ಲದಿದ್ದರೂ ಬಹುತೇಕರು ಬೆಂಡೆಕಾಯಿ ಪಾಕವಿಧಾನಗಳನ್ನು ಮಾಡುತ್ತಾರೆ. ಬೆಂಡೆಕಾಯಿ ಫ್ರೈ, ಬೆಂಡೆಕಾಯಿ ಸಾಂಬಾರ್, ಬೆಂಡೆಕಾಯಿ ಸೂಪ್ ಇತ್ಯಾದಿ ತಯಾರಿಸಿ ತಿನ್ನುತ್ತಾರೆ. ಇಲ್ಲಿ ಬೆಂಡೆಕಾಯಿಯಿಂದ ರುಚಿಕರ ಚಟ್ನಿ ಪಾಕವಿಧಾನವನ್ನು ತಿಳಿಸಲಾಗಿದೆ. ಇದನ್ನು ಅನ್ನದೊಂದಿಗೆ ಬೆರೆಸಿ ತಿಂದರೆ ಅದರ ರುಚಿಯೇ ಬೇರೆ. ನಿಮಗೆ ಖಂಡಿತ ಈ ಖಾದ್ಯ ಇಷ್ಟವಾಗುತ್ತದೆ. ಪಾಕವಿಧಾನ ಹೇಗೆ ಎಂಬ ಬಗ್ಗೆ ಇಲ್ಲಿ ತಿಳಿದುಕೊಳ್ಳಿ.

ಬೇಕಾಗುವ ಸಾಮಗ್ರಿಗಳು: ಬೆಂಡೆಕಾಯಿ- ಅರ್ಧ ಕೆಜಿ, ಟೊಮೆಟೊ- ಎರಡು, ಎಣ್ಣೆ- ಎರಡು ಚಮಚ, ಮೆಂತ್ಯ- ಕಾಲು ಚಮಚ, ಸಾಸಿವೆ- ಅರ್ಧ ಚಮಚ, ಜೀರಿಗೆ- ಅರ್ಧ ಚಮಚ, ಕೊತ್ತಂಬರಿ ಬೀಜ- ಒಂದು ಚಮಚ, ಬೆಳ್ಳುಳ್ಳಿ ಎಸಳು- ಐದು, ಒಣಮೆಣಸಿನಕಾಯಿ- ಹತ್ತು, ಕೊತ್ತಂಬರಿ ಸೊಪ್ಪು- ಒಂದು ಹಿಡಿ, ಕರಿಬೇವು- ಒಂದು ಹಿಡಿ, ಹುಣಸೆಹಣ್ಣು- ಒಂದು ನಿಂಬೆ ಗಾತ್ರ, ಉಪ್ಪು - ರುಚಿಗೆ ತಕ್ಕಷ್ಟು, ಅರಿಶಿನ- ಒಂದು ಚಿಟಿಕೆ, ಕಡಲೆ ಬೇಳೆ- ಅರ್ಧ ಚಮಚ,...