ಭಾರತ, ಫೆಬ್ರವರಿ 13 -- ಮಾಂಸಾಹಾರ ಪ್ರಿಯರು ವೀಕೆಂಡ್ ಬಂತು ಅಂದ್ರೆ ಮಟನ್‌ನಿಂದ ಮಾಡಿದ ಭಕ್ಷ್ಯಗಳನ್ನು ತಿನ್ನಲು ಇಷ್ಟಪಡುತ್ತಾರೆ. ಅದರಲ್ಲೂ ಮಟನ್ ಲಿವರ್ ಖಾದ್ಯ ತಯಾರಿಸಿ ತಿನ್ನುವವರೇ ಹೆಚ್ಚು. ಮಟನ್ ಲಿವರ್ ಗ್ರೇವಿ ತಯಾರಿಸುವುದು ತುಂಬಾನೇ ಸುಲಭ. ಇದು ಅನ್ನದೊಂದಿಗೆ ಮಾತ್ರವಲ್ಲ ಚಪಾತಿ, ರೊಟ್ಟಿ ಜೊತೆಯೂ ತಿನ್ನಲು ಬಹಳ ರುಚಿಕರವಾಗಿರುತ್ತದೆ. ಅಷ್ಟೇ ಅಲ್ಲ ದೋಸೆ, ಇಡ್ಲಿಯೊಂದಿಗೂ ತಿನ್ನಲು ಬಹಳ ರುಚಿಯಾಗಿರುತ್ತದೆ ಮಟನ್ ಲಿವರ್ ಗ್ರೇವಿ ತಯಾರಿಸುವುದು ತುಂಬಾ ಸುಲಭ. ಇದನ್ನು ತಯಾರಿಸುವುದು ಹೇಗೆ ಅನ್ನೋದು ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು: ಎಣ್ಣೆ- ನಾಲ್ಕು ಚಮಚ, ಕೊತ್ತಂಬರಿ ಬೀಜ- ಎರಡು ಚಮಚ, ಜೀರಿಗೆ- 1 ಚಮಚ, ಸೋಂಪು- ಅರ್ಧ ಚಮಚ, ಕಾಳುಮೆಣಸು- ಒಂದು ಚಮಚ, ಗಸಗಸೆ- ಅರ್ಧ ಚಮಚ, ಒಣಮೆಣಸಿನಕಾಯಿ- ಎರಡು, ಕರಿಬೇವು- ಒಂದು ಹಿಡಿ, ಉಪ್ಪು ರುಚಿಗೆ ತಕ್ಕಷ್ಟು, ಈರುಳ್ಳಿ- ಎರಡು, ಶುಂಠಿ-ಬೆಳ್ಳುಳ್ಳಿ ಪೇಸ್ಟ್ - ಒಂದು ಚಮಚ, ಟೊಮೆಟೊ ಪ್ಯೂರಿ- ಅರ್ಧ ಕಪ್, ಮಟನ್ ಲಿವರ್- 400 ಗ್ರಾಂ, ಅರಿಶಿನ- ಅರ್ಧ ಚಮಚ, ಮೆಣಸಿನ ಪ...