ಭಾರತ, ಜನವರಿ 31 -- ಅಣಬೆ ನಮ್ಮ ಆರೋಗ್ಯಕ್ಕೆ ಉತ್ತಮವಾದ ಸಾಕಷ್ಟು ಪೋಷಕಾಂಶಗಳನ್ನು ಹೊಂದಿರುತ್ತವೆ. ವಾರಕ್ಕೊಮ್ಮೆಯಾದರೂ ಅಣಬೆಯಿಂದ ತಯಾರಿಸಲಾದ ವಿವಿಧ ಭಕ್ಷ್ಯಗಳನ್ನು ತಿನ್ನುವುದು ಒಳ್ಳೆಯದು. ಮಶ್ರೂಮ್ ಬಿರಿಯಾನಿ, ಮಶ್ರೂಮ್ ಪಲ್ಯ ಇತ್ಯಾದಿ ಖಾದ್ಯ ತಯಾರಿಸಬಹುದು. ಅದೇ ರೀತಿ ಮಶ್ರೂಮ್ ಫ್ರೈ ಕೂಡ ತುಂಬಾ ರುಚಿಕರವಾಗಿರುತ್ತದೆ. ಇಲ್ಲಿ ಮಶ್ರೂಮ್ ಫ್ರೈ ಪಾಕವಿಧಾನವನ್ನು ನೀಡಲಾಗಿದೆ. ಇದು ಅನ್ನಕ್ಕೆ ಮಾತ್ರವಲ್ಲ ಚಪಾತಿಗೂ ತಿನ್ನಲು ರುಚಿಕರವಾಗಿರುತ್ತದೆ. ಅಣಬೆ ಫ್ರೈ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಬೇಕಾಗುವ ಸಾಮಗ್ರಿಗಳು: ಅಣಬೆ- 200 ಗ್ರಾಂ, ಅರಿಶಿನ- ಅರ್ಧ ಚಮಚ, ನೀರು- ಅಗತ್ಯಕ್ಕೆ ತಕ್ಕಷ್ಟು, ಉಪ್ಪು ರುಚಿಗೆ ತಕ್ಕಷ್ಟು, ಈರುಳ್ಳಿ- ಎರಡು, ಎಣ್ಣೆ- ಎರಡು ಚಮಚ, ದಾಲ್ಚಿನ್ನಿ- ಒಂದು ಸಣ್ಣ ತುಂಡು, ಲವಂಗ- ಮೂರು, ಶುಂಠಿ-ಬೆಳ್ಳುಳ್ಳಿ ಪೇಸ್ಟ್- ಒಂದು ಚಮಚ, ಕರಿಬೇವು- ಒಂದು ಹಿಡಿ, ಹಸಿ ಮೆಣಸಿನಕಾಯಿ- ಮೂರು, ಹಸಿಮೆಣಸು- ಎರಡು ಚಮಚ, ಕೊತ್ತಂಬರಿ ಪುಡಿ- ಒಂದು ಚಮಚ, ಜೀರಿಗೆ ಪುಡಿ- ಅರ್ಧ ...