Bengaluru, ಮೇ 24 -- ಬೇಸಿಗೆ ಕಾಲ ಇಷ್ಟವಿಲ್ಲದಿದ್ದರೂ ಬಹುತೇಕರು ಮಾವಿನಹಣ್ಣಿಗಾಗಿ ಈ ಋತುವನ್ನು ಇಷ್ಟಪಡುತ್ತಾರೆ. ಮಾಗಿದ ಮಾವಿನಹಣ್ಣನ್ನು ತಿನ್ನುತ್ತಿದ್ದರೆ ಅದರ ರುಚಿಯೇ ಬೇರೆ. ಈ ಹಣ್ಣನ್ನು ಹಾಗೆಯೇ ತಿನ್ನಬಹುದು ಅಥವಾ ವಿವಿಧ ಖಾದ್ಯಗಳನ್ನು ತಯಾರಿಸಿ ಸವಿಯಬಹುದು. ಮಾವಿನ ಹಣ್ಣಿನ ಶೇಕ್, ಚಟ್ನಿ, ಆಮ್ ಪನ್ನಾ, ಕೇಕ್, ಸಲಾಡ್, ಸ್ಮೂಥಿ, ಐಸ್ ಕ್ರೀಮ್, ಖೀರ್ ಮುಂತಾದ ವೈವಿಧ್ಯಮಯ ಪಾಕವಿಧಾನಗಳನ್ನು ಪ್ರಯತ್ನಿಸಬಹುದು.

ಹಸಿ ಮಾವಿನಕಾಯಿಯಿಂದ ತಯಾರಿಸಲಾಗುವ ಆಮ್ ಪನ್ನಾ ದೇಹವನ್ನು ತಂಪಾಗಿಸುತ್ತದೆ. ಹಾಗೆಯೇ ಮಾವಿನಹಣ್ಣಿನ ಶೇಕ್ ಅದರ ಅದ್ಭುತ ರುಚಿಯೊಂದಿಗೆ ನಾಲಗೆಯನ್ನು ಸಿಹಿಗೊಳಿಸುತ್ತದೆ. ಮಾವಿನ ಹಣ್ಣಿನಿಂದ ವಿಶಿಷ್ಟ ಹಾಗೂ ರುಚಿಕರ ಪಾಕವಿಧಾನಗಳನ್ನು ಪ್ರಯತ್ನಿಸಲು ಬಯಸಿದರೆ ಇಲ್ಲಿದೆ ಮ್ಯಾಂಗೋ (ಮಾವಿನಹಣ್ಣಿನ) ಚೀಸ್ ಕೇಕ್ ರೆಸಿಪಿ. ಇದನ್ನು ತಯಾರಿಸುವುದು ತುಂಬಾನೇ ಸರಳ. ಇಲ್ಲಿದೆ ರೆಸಿಪಿ.

ಇದನ್ನೂ ಓದಿ: ಈ ಕಾರಣಕ್ಕಾಗಿ ಬೇಸಿಗೆಯಲ್ಲಿ ಮಾವಿನಹಣ್ಣು ತಿನ್ನಬೇಕಂತೆ; ನ್ಯೂಟ್ರಿಷನಿಸ್ಟ್ ರುಜುತಾ ದಿವೇಕರ್ ಹೇ...