ಭಾರತ, ಜನವರಿ 29 -- ಚಿಕನ್ ಚಾಪ್ಸ್ ಒಂದು ರುಚಿಕರ ಮತ್ತು ಜನಪ್ರಿಯ ಖಾದ್ಯವಾಗಿದ್ದು, ಇದನ್ನು ಮುಖ್ಯವಾಗಿ ಹಸಿಮೆಣಸಿನಕಾಯಿ, ಪುದೀನ ಸೊಪ್ಪು, ಕೊತ್ತಂಬರಿಸೊಪ್ಪು ಹಾಕಿ ತಯಾರಿಸಲಾಗುತ್ತದೆ. ಅನ್ನದ ಜೊತೆ ಮಾತ್ರವಲ್ಲ ಚಪಾತಿ, ದೋಸೆ, ಇಡ್ಲಿಯೊಂದಿಗೂ ತಿನ್ನಲು ರುಚಿಕರವಾಗಿರುತ್ತದೆ. ಚಿಕನ್‍ನಲ್ಲಿ ಬಗೆಬಗೆಯ ಖಾದ್ಯಗಳನ್ನು ತಯಾರಿಸಬಹುದು. ಮನೆಗೆ ಅತಿಥಿಗಳು ಬಂದಾಗ ಇದನ್ನು ತಯಾರಿಸಿ ಬಡಿಸಬಹುದು. ಖಂಡಿತ ಎಲ್ಲರೂ ಇಷ್ಟಪಟ್ಟು ತಿಂತಾರೆ. ಚಿಕನ್ ಚಾಪ್ಸ್ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಬೇಕಾಗುವ ಸಾಮಗ್ರಿಗಳು: ಕೋಳಿ ಮಾಂಸ- 1 ಕೆಜಿ, ಅಡುಗೆ ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು, ಈರುಳ್ಳಿ- 2, ಟೊಮೆಟೊ- 1, ಹಸಿಮೆಣಸಿನಕಾಯಿ- 10, ಶುಂಠಿ- 1 ಇಂಚಿನಷ್ಟು, ಬೆಳ್ಳುಳ್ಳಿ ಎಸಳು- 10, ಕೊತ್ತಂಬರಿ ಸೊಪ್ಪು- ಒಂದೂವರೆ ಕಪ್, ಪುದೀನಾ ಸೊಪ್ಪು- ಒಂದೂವರೆ ಕಪ್, ಕೊತ್ತಂಬರಿ ಪುಡಿ- 3 ಚಮಚ, ಅರಶಿನ- ಅರ್ಧ ಚಮಚ, ತೆಂಗಿನತುರಿ- ಅರ್ಧ ಕಪ್, ರುಚಿಗೆ ತಕ್ಕಷ್ಟು ಉಪ್ಪು, ಜೀರಿಗೆ- 2 ಚಮಚ, ಕಾಳುಮೆಣಸು- 1 ಚಮಚ, ...