ಭಾರತ, ಫೆಬ್ರವರಿ 7 -- ಪ್ರತಿದಿನ ಮೊಟ್ಟೆ ತಿನ್ನುವುದರಿಂದ ಹಲವು ಪ್ರಯೋಜನಗಳಿವೆ. ಬೆಳಗ್ಗಿನ ಉಪಾಹಾರವಾಗಿರಲಿ, ಮಧ್ಯಾಹ್ನದ ಅಥವಾ ರಾತ್ರಿಯೂಟಕ್ಕೂ ಮೊಟ್ಟೆಯ ಭಕ್ಷ್ಯಗಳು ಅತ್ಯುತ್ತಮ ಆಯ್ಕೆ ಅಂದ್ರೆ ತಪ್ಪಿಲ್ಲ. ಮೊಟ್ಟೆಯಿಂದ ತರಹೇವಾರಿ ಖಾದ್ಯಗಳನ್ನು ತಯಾರಿಸಬಹುದು. ಪೋಷಕಾಂಶಗಳಿಂದ ಸಮೃದ್ಧವಾಗಿರುವ ಮೊಟ್ಟೆ ತಿನ್ನುವುದು ನಮ್ಮ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಅಷ್ಟೇ ಅಲ್ಲ ರುಚಿಯಲ್ಲೂ ಅದ್ಭುತ.

ಮೊಟ್ಟೆಯ ಬುರ್ಜಿ, ಆಮ್ಲೆಟ್, ಮೊಟ್ಟೆ ಪರೋಟ, ಮೊಟ್ಟೆ ಫ್ರೈ, ಮೊಟ್ಟೆ ಘೀ ರೋಸ್ಟ್, ಮೊಟ್ಟೆ ಸಾರು ಇತ್ಯಾದಿ ಖಾದ್ಯಗಳನ್ನು ತಿಂದಿರಬಹುದು. ಇಲ್ಲಿದೆ ಆರೋಗ್ಯಕರ ಹಾಗೂ ರುಚಿಕರವಾದ ಮೊಟ್ಟೆ ಹಾಗೂ ಎಲೆಕೋಸಿನಿಂದ ತಯಾರಿಸಲಾದ ಖಾದ್ಯ. ಈ ಪಾಕವಿಧಾನ ತುಂಬಾ ಸರಳ. ಬೆಳಗ್ಗಿನ ಉಪಾಹಾರಕ್ಕೆ ಇದು ಉತ್ತಮ ಖಾದ್ಯ. ಇದನ್ನು ರೊಟ್ಟಿ, ಚಪಾತಿ, ಪರೋಟ, ಅನ್ನ ಇತ್ಯಾದಿ ಜೊತೆ ತಿನ್ನಲು ಬಹಳ ರುಚಿಕರವಾಗಿರುತ್ತದೆ, ಹಾಗಿದ್ದರೆ ಎಲೆಕೋಸು-ಮೊಟ್ಟೆ ಫ್ರೈ ಖಾದ್ಯವನ್ನು ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಬೇಕಾಗುವ ಸ...