ಭಾರತ, ಮಾರ್ಚ್ 6 -- ಬೇಸಿಗೆ ಈಗಾಗಲೇ ಆರಂಭವಾಗಿದೆ. ಬಹುತೇಕ ಎಲ್ಲರೂ ತಂಪು ಪಾನೀಯ, ಐಸ್ ಕ್ರೀಂ ಇತ್ಯಾದಿಯತ್ತ ಮೊರೆ ಹೋಗುತ್ತಿದ್ದಾರೆ. ಅದರಲ್ಲೂ ಐಸ್ ಕ್ರೀಂ ಅಂದ್ರೆ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಬಾಯಿಚಪ್ಪರಿಸಿಕೊಂಡು ತಿಂತಾರೆ. ಸಾಮಾನ್ಯವಾಗಿ ಐಸ್ ಕ್ರೀಂ ಇಷ್ಟವಿಲ್ಲ ಎಂದು ಇರುವವರು ಬಹುಷಃ ಕಡಿಮೆ. ಇದನ್ನು ಹೊರಗೆ ಖರೀದಿಸಿ ತಿನ್ನುವ ಬದಲು ಮನೆಯಲ್ಲೇ ಬಹಳ ಸರಳವಾಗಿ ತಯಾರಿಸಬಹುದು.

ಮಕ್ಕಳು ಕುಲ್ಫಿಯನ್ನು ಬಹಳ ಇಷ್ಟಪಡುತ್ತಾರೆ. ಅವರಿಗಾಗಿ ಖರ್ಬೂಜ ಕುಲ್ಫಿ ಮಾಡಿ ಕೊಡಬಹುದು. ಸಿಹಿ ಮತ್ತು ಸ್ವಾದಿಷ್ಟಕರ ಕುಲ್ಫಿಗಿಂತ ಉತ್ತಮವಾದದ್ದು ಬೇರ್ಯಾವುದು ಇರಲಿಕ್ಕಿಲ್ಲ. ಬೇಸಿಗೆಯಲ್ಲಿ ಯಥೇಚ್ಛವಾಗಿ ಖರ್ಬೂಜ ಹಣ್ಣು ದೊರೆಯುತ್ತದೆ. ಇದು ಬಹಳ ಆರೋಗ್ಯಕರ ಹಣ್ಣೂ ಹೌದು. ಇದರಿಂದ ಬಹಳ ರುಚಿಕರವಾದ ಕುಲ್ಫಿ ತಯಾರಿಸಬಹುದು. ಕುಲ್ಫಿಯು ಸಾಂಪ್ರದಾಯಿಕ ಪಂಜಾಬಿ ಸಿಹಿತಿಂಡಿಯಾಗಿದೆ. ಈ ಹಳೆಯ ಪಾಕವಿಧಾನಕ್ಕೆ ಖರ್ಬೂಜದ ತಿರುಳನ್ನು ಬೆರೆಸಿ ಕುಲ್ಫಿ ಐಸ್ ಕ್ರೀಂ ತಯಾರಿಸಬಹುದು. ಇದನ್ನು ಮಾಡುವುದು ಹೇಗೆ ಅನ್ನೋದನ್ನು ಇಲ್...