ಭಾರತ, ಮಾರ್ಚ್ 4 -- ಸಮಯ ಕಡಿಮೆಯಿದ್ದಾಗ ಅಥವಾ ಈ ಬೇಸಿಗೆಗೆ ಮೊಸರು ಕರಿಯನ್ನು ಮಾಡಿ ತಿನ್ನಬಹುದು. ಬಿರು ಬಿಸಿಲಿನ ತಾಪ ಈಗಾಗಲೇ ಹೆಚ್ಚಿದ್ದು, ಜನರು ತಂಪು ಪಾನೀಯ, ಎಳನೀರು ಇತ್ಯಾದಿಯತ್ತ ಮುಖ ಮಾಡುತ್ತಿದ್ದಾರೆ. ಮಧ್ಯಾಹ್ನ ಊಟ ಅದರಲ್ಲೂ ಸಾಂಬಾರ್ ಹಾಕಿ ಊಟ ಮಾಡುವುದೇ ಬೇಡ ಎಂದೆನಿಸುತ್ತದೆ. ಅಂಥವರು ಮೊಸರು ಕರಿ ಮಾಡಿ ತಿನ್ನಬಹುದು. ಕೇವಲ 2 ನಿಮಿಷಗಳಲ್ಲಿ ಸಿದ್ಧವಾಗುವ ಖಾದ್ಯವಿದು. ಇದು ತುಂಬಾ ರುಚಿಕರವಾಗಿರುತ್ತದೆ. ಅನ್ನ, ರೊಟ್ಟಿ, ಚಪಾತಿಯೊಂದಿಗೂ ತಿನ್ನಬಹುದು. ಮೊಸರು ಕರಿ ತಯಾರಿಸುವುದು ಹೇಗೆ ಅನ್ನೋದು ಇಲ್ಲಿದೆ.

ಬೇಕಾಗುವ ಪದಾರ್ಥಗಳು: ಮೊಸರು - ಒಂದು ಕಪ್, ಮೆಣಸಿನ ಪುಡಿ - ಒಂದು ಚಮಚ, ಹಸಿ ಮೆಣಸಿನಕಾಯಿ - ಮೂರು, ಅರಿಶಿನ - ಅರ್ಧ ಚಮಚ, ಈರುಳ್ಳಿ - ಒಂದು, ಕೊತ್ತಂಬರಿ ಪುಡಿ - ಎರಡು ಚಮಚ, ಉಪ್ಪು ರುಚಿಗೆ ತಕ್ಕಷ್ಟು, ನೀರು - ಅರ್ಧ ಕಪ್, ಎಣ್ಣೆ - ಎರಡು ಚಮಚ, ಕಡಲೆ ಹಿಟ್ಟು - ಅರ್ಧ ಚಮಚ. ಸಾಸಿವೆ - ಅರ್ಧ ಚಮಚ, ಜೀರಿಗೆ - ಅರ್ಧ ಚಮಚ.

ಮಾಡುವ ವಿಧಾನ: ಮೊಸರು ಕರಿ ಮಾಡಲು, ಮೊದಲು ಮೊಸರನ್ನು ಒಂದು ಕಪ್‌...