Bengaluru, ಏಪ್ರಿಲ್ 17 -- ಕನ್ನಡ ಕಿರುತೆರೆಯಲ್ಲಿ ಹೊಸ ಹೊಸ ಕಲಾವಿದರ ಆಗಮನ ಹೆಚ್ಚಾಗುತ್ತಿದೆ. ನಟನೆಯ ತರಬೇತಿ ಪಡೆದು ಅಖಾಡಕ್ಕಿಳಿಯುತ್ತಿರುವವರು ಒಂದೆಡೆಯಾದರೆ, ನಟನೆಯನ್ನೇ ಹವ್ಯಾಸವನ್ನಾಗಿಸಿಕೊಂಡು, ಫ್ಯಾಷನ್‌ ಎಂಬಂತೆ ನಟನೆಯ ಗೀಳು ಅಂಟಿಸಿಕೊಂಡು ಕಿರುತೆರೆಗೆ ಆಗಮಿಸಿದವರೂ ಸಾಕಷ್ಟು ಜನರಿದ್ದಾರೆ. ಗಾಡ್‌ ಫಾದರ್‌ ಹಂಗಿಲ್ಲದೆ, ತಮ್ಮ ಪ್ರತಿಭೆಯ ಮೂಲಕವೇ ಸಾಧಿಸಬೇಕು, ಕಿರುತೆರೆ, ಸಿನಿಮಾ ಲೋಕದಲ್ಲಿ ಏನಾದರೂ ಹೆಸರು ಮಾಡಬೇಕು ಎಂದುಕೊಂಡು ಬಂದವರಿದ್ದಾರೆ. ಆ ಸಾಲಿಗೆ ಸೇರಲು ಹೊರಟಿದ್ದಾರೆ ಈ ನಟ.

ಕನ್ನಡ ಕಿರುತೆರೆಯಲ್ಲಿ ಪ್ರಸಾರ ಕಾಣುವ ಸೀರಿಯಲ್‌ವೊಂದರಲ್ಲಿ ನಾಯಕನಾಗಿ ನಟಿಸುತ್ತಿರುವ ಈ ನಟ, ಸದ್ಯ ಕಿರುತೆರೆ ವೀಕ್ಷಕರ ಇಷ್ಟದ ಹೀರೋ. ಅವರಾಡುವ ಮಾತು, ಆಂಗಿಕ ಅಭಿನಯ, ಖಡಕ್‌ ಲುಕ್‌ ಮೂಲಕವೇ ವೀಕ್ಷಕರ ಗಮನ ಸೆಳೆದಿದ್ದಾರೆ. ಕೇವಲ ಅಷ್ಟೇ ಅಲ್ಲ, ಇವರ ನಟನೆಯ ಧಾರಾವಾಹಿಯ ಟಿಆರ್‌ಪಿಯಯೂಲ್ಲಿ ನಂಬರ್‌ 1 ಸ್ಥಾನ ಅಲಂಕರಿಸಿದ ಉದಾಹರಣೆ ಇದೆ. ಈಗಲೇ ನಂಬರ್‌ 1 ಸ್ಥಾನದ ಆಸುಪಾಸಿನಲ್ಲಿಯೇ ಠಿಕಾಣಿ ಹೂಡಿರುತ್ತದೆ ಆ ಸೀರಿ...