Bengaluru, ಏಪ್ರಿಲ್ 5 -- Sri Rama Navami 2025: ಶ್ರೀ ರಾಮನು ಏಕಪತ್ನಿತ್ವದ ವ್ಯಕ್ತಿ. ಪ್ರಾಮಾಣಿಕ ಮತ್ತು ನೀತಿವಂತ ವ್ಯಕ್ತಿ, ಸತ್ಯ ಮತ್ತು ನೀತಿಯ ಪರವಾಗಿದ್ದನು. ತನ್ನ ಹೆತ್ತವರನ್ನು ಮಾತಿಗೆ ಬದ್ಧನಾಗಿ ನಿಂತವನು, ಎಂದೂ ಕೂಡ ಹೆತ್ತವರ ಮಾತನ್ನು ವಿರೋಧಿಸಿಲ್ಲ. ಪಟ್ಟಾಭಿಷೇಕವನ್ನು ಬದಿಗಿಟ್ಟು ಕಾಡಿಗೆ ಹೋಗಿ ಮಹಾನ್ ರಾಜನಾಗಿ ಹೆಸರು ಗಳಿಸಿದನು.

ತನ್ನ 14 ವರ್ಷಗಳ ವನವಾಸವನ್ನು ತಾಳ್ಮೆಯಿಂದ ಪೂರ್ಣಗೊಳಿಸಿದ ನಂತರ, ಶ್ರೀರಾಮನು ಅಯೋಧ್ಯೆಗೆ ಮರಳಿದನು. ಪ್ರತಿಯೊಬ್ಬರೂ ರಾಮನಿಂದ ತಾಳ್ಮೆಯನ್ನು ಕಲಿಯಬೇಕು. ಅಂತೆಯೇ, ರಾಮನು ರಾಜನ ಸ್ಥಾನದಲ್ಲಿದ್ದರೂ, ಜನರ ಬಗ್ಗೆ ದಯೆ ಮತ್ತು ಸಹಾನುಭೂತಿ ಹೊಂದಿದ್ದನು. ಶಬರಿ ನೀಡಿದ ಹಣ್ಣುಗಳನ್ನು ಪ್ರೀತಿ ಮತ್ತು ಗೌರವದಿಂದ ತಿನ್ನುತ್ತಿದ್ದನು.

ರಾಮನು ಕಾಡಿನಲ್ಲಿದ್ದರೂ ಅಲ್ಲಿ ತಮ್ಮನ್ನು ಭೇಟಿಯಾದವರೊಂದಿಗೆ ಸ್ನೇಹದಿಂದ ಇದ್ದನು. ಇದನ್ನು ಕೂಡ ರಾಮನಿಂದ ಕಲಿಯಬೇಕು. ಅವರು ಎಂದಿಗೂ ಯಾರೊಂದಿಗೂ ಅಗೌರವದಿಂದ ಮಾತನಾಡಲಿಲ್ಲ ಅಥವಾ ಯಾರೊಂದಿಗೂ ಅಸಭ್ಯವಾಗಿ ವರ್ತಿಸಲಿಲ್ಲ. ಅವನು ಎಷ್...