ಭಾರತ, ಫೆಬ್ರವರಿ 10 -- ಜಗತ್ತಿನಲ್ಲಿ ಹಲವು ಜಾತಿ-ಧರ್ಮಗಳನ್ನು ಅನುಸರಿಸುವ ಜನರಿದ್ದಾರೆ. ಕೆಲವು ದೇಶಗಳಲ್ಲಿ ಒಂದೇ ಧರ್ಮದ ಜನರ ಸಂಖ್ಯೆ ಹೆಚ್ಚಿದ್ದರೆ, ಭಾರತದಂತಹ ದೇಶಗಳಲ್ಲಿ ಹಲವು ಧರ್ಮಗಳ ಜನರು ಸಹಬಾಳ್ವೆ ನಡೆಸುತ್ತಿದ್ದಾರೆ. ಅತ್ತ ಆರ್ಥಿಕ ಸ್ಥಿತಿಯ ನೆಲೆಗಟ್ಟಿನಲ್ಲಿ ನೋಡಿದಾಗ, ವಿವಿಧ ವರ್ಗಗಳ ಜನರೂ ಇರುತ್ತಾರೆ. ಜಗತ್ತಿನ ಶ್ರೀಮಂತ ವ್ಯಕ್ತಿಗಳ ಪಟ್ಟಿ ನೋಡಿದರೆ, ಒಂದು ಕಾಲದಲ್ಲಿ ಬಿಲ್ ಗೇಟ್ಸ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದರು. ಈಗ ಟೆಸ್ಲಾ ಮಾಲೀಕ ಎಲೋನ್ ಮಸ್ಕ್ ವಿಶ್ವದ ನಂಬರ್ ವನ್ ಶ್ರೀಮಂತ. ಇವರಂತೆಯೇ ಹಲವು ಶ್ರೀಮಂತ ವ್ಯಕ್ತಿಗಳು ಕೋಟಿಕೋಟಿ ಲೆಕ್ಕದಲ್ಲಿ ಆಸ್ತಿ ಹೊಂದಿದ್ದಾರೆ. ನಿವ್ವಳ ಆಸ್ತಿ ಮೌಲ್ಯದ ಪ್ರಕಾರ, ಭಾರತದಲ್ಲಿ ಮುಖೇಶ್ ಅಂಬಾನಿ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬುದು ಬಹುತೇಕ ಎಲ್ಲರಿಗೂ ತಿಳಿದಿದೆ.

ಇಲ್ಲಿ ಇಷ್ಟೆಲ್ಲಾ ಪೀಠಿಕೆ ಹಾಕಲು ಕಾರಣವಿದೆ. ಇತ್ತೀಚೆಗೆ ಸೋಷಿಯಲ್‌ ಮೀಡಿಯಾದಲ್ಲಿ ಜಗತ್ತಿನ ಅತ್ಯಂತ ಶ್ರೀಮಂತ ಧರ್ಮ ಯಾವುದು ಎಂಬ ಚರ್ಚೆ ಜೋರಾಗಿದೆ. ಅಂದರೆ, ಯಾವ ಧರ್ಮಕ್ಕೆ...