Bengaluru, ಫೆಬ್ರವರಿ 10 -- Kadhalikka Neramillai OTT: ಕಾಲಿವುಡ್‌ ನಟ ಜಯಂ ರವಿ ಮತ್ತು ನಿತ್ಯಾ ಮೆನನ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಕಾದಲಿಕ್ಕ ನೆರಮಿಲ್ಲೈ, ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಪ್ರೇಕ್ಷಕರ ಮೆಚ್ಚುಗೆ ಪಡೆದಿತ್ತು. ಜನವರಿ 14ರಂದು ಸಂಕ್ರಾಂತಿ ಹಬ್ಬದ ಪ್ರಯುಕ್ತ ತೆರೆಕಂಡಿದ್ದ ಈ ಸಿನಿಮಾದಲ್ಲಿ ಪ್ರಸ್ತುತ ಕಾಲಘಟ್ಟದ ಸಂಬಂಧಗಳ ಬಗ್ಗೆ ಬೆಳಕು ಚೆಲ್ಲಲಾಗಿತ್ತು. ಇದೀಗ ಇದೇ ಸಿನಿಮಾ ಒಟಿಟಿಗೆ ಆಗಮಿಸುತ್ತಿದೆ.

ಕಾದಲಿಕ್ಕ ನೆರಮಿಲ್ಲೈ ಸಿನಿಮಾ ನಾಳೆ (ಫೆಬ್ರವರಿ 11) ನೆಟ್‌ಫ್ಲಿಕ್ಸ್‌ ಒಟಿಟಿ ವೇದಿಕೆಯಲ್ಲಿ ಸ್ಟ್ರೀಮ್ ಆಗಲಿದೆ. ಮೂಲ ತಮಿಳಿನ ಜತೆತೆ ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿಯೂ ಈ ಸಿನಿಮಾ ವೀಕ್ಷಣೆಗೆ ಲಭ್ಯ ಇರಲಿದೆ. ಈ ವಿಚಾರವನ್ನು ಸ್ವತಃ ನೆಟ್‌ಫ್ಲಿಕ್ಸ್‌ ಒಟಿಟಿ ಖಚಿತಪಡಿಸಿದೆ. ಚಿತ್ರಮಂದಿರಗಳಲ್ಲಿ ತಮಿಳು ಭಾಷೆಯಲ್ಲಿ ಮಾತ್ರ ಬಿಡುಗಡೆಯಾದ ಕಾದಲಕ್ಕ ನೆರಮಿಲ್ಲೈ ಚಿತ್ರವು ಒಟಿಟಿಯಲ್ಲಿ ಐದು ಭಾಷೆಗಳಲ್ಲಿ ಬಿಡುಗಡೆ ಆಗುವುದರಿಂದ, ಹ...