Bengaluru, ಜನವರಿ 30 -- Janhvi Kapoor: ಬಾಲಿವುಡ್ ಸೆಲೆಬ್ರಿಟಿಗಳು ಸಿನಿಮಾಗಳ ಮೂಲಕ ತಮ್ಮ ವೃತ್ತಿಜೀವನವನ್ನು ಬೆಳಗಿಸಿದರೆ, ಕೆಲವು ಕಂಪನಿಗಳು ಅವರ ಮೂಲಕ ತಮ್ಮ ಬ್ರ್ಯಾಂಡ್‌ಗಳನ್ನು ಜನರೆಡೆಗೆ ಕೊಂಡೊಯ್ಯುತ್ತವೆ. ಈಗಾಗಲೇ ಅನೇಕ ಸಿನಿಮಾ ತಾರೆಯರು ಸಾಕಷ್ಟು ಬ್ರಾಂಡ್‌ಗಳ ರಾಯಭಾರಿಗಳಾಗಿದ್ದಾರೆ. ಈ ಪಟ್ಟಿಯಲ್ಲಿ ಬಾಲಿವುಡ್‌ನಿಂದ ಕರೀನಾ ಕಪೂರ್, ಮಲೈಕಾ ಅರೋರಾ, ಕತ್ರಿನಾ ಕೈಫ್‌ನಿಂದ ಕಾರ್ತಿಕ್ ಆರ್ಯನ್ ವರೆಗೆ ಸಾಲು ಸಾಲು ಹೆಸರುಗಳಿವೆ.

ಹೀಗಿರುವಾಗಲೇ ಮ್ಯಾನ್‌ಫೋರ್ಸ್‌ನ ಕಾಂಡೋಮ್ ಕಂಪನಿ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಜುನೇಜಾ ಇತ್ತೀಚೆಗೆ ತಮ್ಮ ಕಂಪನಿಯ ಬ್ರಾಂಡ್ ರಾಯಭಾರಿಗಳ ಬಗ್ಗೆ ಮಾತನಾಡಿದ್ದಾರೆ. ಈ ಸಮಯದಲ್ಲಿ, ಅವರು ತಮ್ಮ ಬ್ರಾಂಡ್‌ನ ರಾಯಭಾರಿಯಾಗಲು ಬಯಸಿದ ಕೆಲವು ತಾರೆಯರ ಹೆಸರುಗಳನ್ನು ಸಂದರ್ಶನದ ಮುಂದಿಟ್ಟರು. ಈ ಜಾಹೀರಾತು ಪ್ರಸ್ತಾಪವನ್ನು ಸ್ವೀಕರಿಸಲು ನಿರಾಕರಿಸಿದ ಸೆಲೆಬ್ರಿಟಿಗಳ ಬಗ್ಗೆಯೂ ಹೇಳಿದರು. ಆ ಪೈಕಿ ಜಾನ್ವಿ ಕಪೂರ್‌ ಅವರನ್ನೂ ಸಂಪರ್ಕಿಸಿದ್ದರ ಬಗ್ಗೆ ರಾಜೀವ್‌ ಹೇಳಿ...