Bengaluru, ಮೇ 11 -- ಹಣ್ಣುಗಳ ರಾಜ ಮಾವಿನಹಣ್ಣು ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಬಹುತೇಕ ಮಂದಿಗೆ ಬೇಸಿಗೆ ಅಂದ್ರೆ ಇಷ್ಟವಾಗುವುದೇ ಈ ಮಾವಿನ ಹಣ್ಣು ಸವಿಯುವುದಕ್ಕಾಗಿ. ಮಾವು ಇಷ್ಟಪಡದವರು ಬಹುಷಃ ಯಾರೂ ಇರಲಿಕ್ಕಿಲ್ಲ. ಇದು ಕೇವಲ ರುಚಿಕರವಾಗಿರುವುದು ಮಾತ್ರವಲ್ಲ, ಆರೋಗ್ಯಕ್ಕೂ ಬಹಳ ಪ್ರಯೋಜನಕಾರಿಯಾಗಿದೆ. ಇತ್ತೀಚೆಗೆ ಸೆಲೆಬ್ರಿಟಿ ನ್ಯೂಟ್ರಿಷನಿಸ್ಟ್ ರುಜುತಾ ದಿವೇಕರ್ ಅವರು ಮಾವಿನ ಹಣ್ಣಿನ ಪ್ರಯೋಜನದ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
ಬಾಲಿವುಡ್ ನಟಿ ಕರೀನಾ ಕಪೂರ್ ಅವರಿಗೆ ನ್ಯೂಟ್ರಿಷನಿಸ್ಟ್ ಆಗಿದ್ದ ರುಜುತಾ ದಿವೇಕರ್, ಬೇಸಿಗೆಯಲ್ಲಿ ಮಾವಿನಹಣ್ಣು ತಿನ್ನುವುದರಿಂದ ಆಗುವ ಪ್ರಯೋಜನಗಳನ್ನು ಹಂಚಿಕೊಂಡಿದ್ದಾರೆ. ರುಜುತಾ ಅವರು ಮಾವಿನ ಹಣ್ಣಿನ ಪೌಷ್ಠಿಕಾಂಶದ ಬಗ್ಗೆ ಅವಲೋಕನವನ್ನು ನೀಡಿದ್ದು, ಅದರ ಪ್ರಯೋಜನದ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
ಮಾವು ತಿನ್ನುವುದು ಮಧುಮೇಹಿಗಳಿಗೆ ಅಥವಾ ಸಕ್ಕರೆ ಸೇವನೆಯನ್ನು ಮಿತಿಗೊಳಿಸಲು ಪ್ರಯತ್ನಿಸುತ್ತಿರುವವರಿಗೆ ಆತಂಕಕಾರಿ ಎಂದು ಕೆಲವ...
Click here to read full article from source
To read the full article or to get the complete feed from this publication, please
Contact Us.