Bengaluru, ಏಪ್ರಿಲ್ 23 -- ಪತಿಯ ಶವದ ಪಕ್ಕ ಕುಳಿತು ಮೌನವಾಗಿ ಕಣ್ಣೀರಿಡುತ್ತಿರುವ ಪತ್ನಿಯ ಚಿತ್ರ ಇದೀಗ ದೇಶಾದ್ಯಂತ ವೈರಲ್ ಆಗಿದೆ. ಉಗ್ರವಾದದ ವಿರುದ್ಧ ಭಾರತೀಯರು ಜಾತಿ-ಧರ್ಮಗಳನ್ನು ಮರೆತು ಒಂದಾಗುತ್ತಿದ್ದಾರೆ. ಈ ಸೋದರಿಯ ಕಣ್ಣೀರು ಒರೆಸಿ, ಸಾಂತ್ವನ ಹೇಳಲು ಪದಗಳೇ ಇಲ್ಲ. ಆದರೆ ಭಯೋತ್ಪಾದಕರ ಅಟ್ಟಹಾಸ ಚಿನ್ನದಂಥ ಕುಟುಂಬವನ್ನು ಕೆಲವೇ ಕ್ಷಣಗಳಲ್ಲಿ ಕಣ್ಣೀರಿನಲ್ಲಿ ಮುಳುಗಿಸಿದ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. 'ಸೋದರಿ, ನಿನ್ನ ಕಣ್ಣೀರು ವ್ಯರ್ಥವಾಗದು' ಎನ್ನುವ ಸಂದೇಶವನ್ನು ಸಾವಿರಾರು ಮಂದಿ ಹಂಚಿಕೊಂಡಿದ್ದಾರೆ. ಈ ಚಿತ್ರವನ್ನು ಹಲವರು ಹಲವು ರೀತಿ ಎಡಿಟ್ ಮಾಡಿ ಶೇರ್ ಮಾಡುತ್ತಿದ್ದಾರೆ.

ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭೀಕರ ಉಗ್ರರ ದಾಳಿಯಲ್ಲಿ 26 ಜನ ಮೃತಪಟ್ಟಿದ್ದಾರೆ.

ಉಗ್ರದಾಳಿಯಲ್ಲಿ 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಭಾರತದ ಸ್ವಿಟ್ಜರ್‌ಲ್ಯಾಂಡ್ ಖ್ಯಾತಿಯ ಈ ಪ್ರದೇಶದ ವೀಕ್ಷಣೆಗೆ ತೆರಳಿದ್ದ ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ.

ಈ ಸಂದರ್ಭ ಉಗ್...