Bengaluru, ಫೆಬ್ರವರಿ 11 -- Daali Dhananjaya Wedding: ಸ್ಯಾಂಡಲ್‌ವುಡ್‌ ನಟ ಡಾಲಿ ಧನಂಜಯ್‌ ಮದುವೆಗೆ ಇನ್ನೇನು ದಿನಗಣನೆ ಶುರುವಾಗಿದೆ. ಫೆ. 16ರಂದು ಮೈಸೂರಿನಲ್ಲಿ ಅದ್ಧೂರಿಯಾಗಿ ನಡೆಯಲಿರುವ ಈ ಕಲ್ಯಾಣ ಕಾರ್ಯಕ್ಕೆ, ಈಗಾಗಲೇ ದೊಡ್ಡ ಮಟ್ಟದ ಮಂಟಪ ನಿರ್ಮಾಣದ ಕಾರ್ಯ ನಡೆಯುತ್ತಿದೆ. ತಮ್ಮ ಮದುವೆಯ ವೇದಿಕೆ ನಿರ್ಮಾಣ ಕಾರ್ಯದ ಸ್ಥಳಕ್ಕೆ ಇಂದು (ಫೆ. 11) ಭೇಟಿ ನೀಡಿದ ಧನಂಜಯ್, ಮದುವೆಯಲ್ಲಿ ಏನೆಲ್ಲ ಇರಲಿದೆ, ಯಾರಿಗೆಲ್ಲ ಕರೆಯಲಾಗಿದೆ, ವಿಶೇಷತೆಗಳೇನು ಎಂಬುದನ್ನು ಹೇಳಿಕೊಂಡಿದ್ದಾರೆ.

ಫೆಬ್ರವರಿ 15 ಮತ್ತು 16ರಂದು ಮೈಸೂರಿನ ವಸ್ತುಪ್ರದರ್ಶನ ಆವರಣದಲ್ಲಿ ನಟ ಡಾಲಿ ಧನಂಜಯ್ -ಧನ್ಯತಾ ಅವರ ಮದುವೆ ನಡೆಯಲಿದೆ. ಅರಮನೆ ನಗರಿ ಮೈಸೂರು ನಟ ಧನಂಜಯ್‌ ಅವರ ಇಷ್ಟದ ಊರು. ಓದಿದ್ದು, ಬೆಳೆದಿದ್ದು ಆ ನಗರದಲ್ಲಿಯೇ. ಈ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ಕರೆದಿದ್ದ ಧನಂಜಯ್‌, ಈ ಮೈಸೂರಿನ ನಂಟಿನ ಬಗ್ಗೆ ಮಾತನಾಡಿದ್ದಾರೆ. ಮೈಸೂರಿನಲ್ಲೇ ಮದುವೆ ಆಗಬೇಕು ಎನ್ನುವುದು ನಮ್ಮ ಕನಸು. ನನ್ನ ವಿದ್ಯಾಭ್ಯಾಸ, ಚಿತ್ರರಂಗಕ್ಕೆ ಕಾಲಿಟ್ಟಿ...