ಭಾರತ, ಫೆಬ್ರವರಿ 7 -- ಇತ್ತೀಚಿನ ದಿನಗಳಲ್ಲಿ ಫ್ರೆಶರ್ ಕುಕ್ಕರ್ ಸೀಟಿ ಕೇಳದ ಮನೆಗಳೇ ಇಲ್ಲ. ಶೇ 90 ರಷ್ಟು ಮನೆಗಳಲ್ಲಿ ಫ್ರೆಶರ್ ಕುಕ್ಕರ್ ಬಳಸುತ್ತಾರೆ. ಅದರಲ್ಲೂ ಶಾಲೆಗೆ ಹೋಗುವ ಮಕ್ಕಳು, ಕೆಲಸಕ್ಕೆ ಹೋಗುವ ಗೃಹಿಣಿಯರು ಇರುವ ಮನೆಗಳಲ್ಲಿ ಫ್ರೆಶರ್ ಕುಕ್ಕರ್ ಬಳಕೆ ಹೆಚ್ಚು. ಯಾಕೆಂದರೆ ಇದರಿಂದ ಸಮಯದೊಂದಿಗೆ ಗ್ಯಾಸ್ ಕೂಡ ಉಳಿತಾಯವಾಗುತ್ತದೆ. ಆ ಕಾರಣಕ್ಕೆ ಅನ್ನದಿಂದ ತರಕಾರಿವರೆಗೆ ಎಲ್ಲವನ್ನೂ ಅದರಲ್ಲಿ ಬೇಯಿಸುತ್ತಾರೆ.

ಆದರೆ ಆರೋಗ್ಯ ತಜ್ಞರ ಪ್ರಕಾರ ಈ ಕೆಲವು ಆಹಾರಗಳನ್ನು ತಪ್ಪಿಯೂ ಫ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬಾರದು. ಇದರಿಂದ ಆರೋಗ್ಯಕ್ಕೆ ಹಾನಿಯೇ ಹೆಚ್ಚು. ಈ ಕೆಲವು ಆಹಾರಗಳನ್ನು ಕುಕ್ಕರ್‌ನಲ್ಲಿ ಬೇಯಿಸುವುದರಿಂದ ಅವುಗಳ ರುಚಿ ಹಾಳಾಗುವುದರ ಜೊತೆ ಆಹಾರದಲ್ಲಿನ ಪೋಷಕಾಂಶವೂ ನಷ್ಟವಾಗಬಹುದು. ನೀವು ಎಷ್ಟೇ ಬ್ಯುಸಿ ಇದ್ರೂ ಪ್ರೆಶರ್ ಕುಕ್ಕರ್‌ನಲ್ಲಿ ಈ ಕೆಲವು ಆಹಾರಗಳನ್ನು ಬೇಯಿಸಲೇಬೇಡಿ. ಬೇಯಿಸಿದ್ರೆ ನಿಮ್ಮ ಆರೋಗ್ಯವನ್ನು ನೀವೇ ಕೆಡಿಸಿಕೊಂಡಂತೆ.

ಕಡಲೆ, ಬಟಾಣಿ, ಮಸೂರ ಮತ್ತು ಬೀನ್ಸ್‌ನಂತಹ ದ್ವಿದಳ ಧಾನ...