ಭಾರತ, ಏಪ್ರಿಲ್ 8 -- ಮಂಗಳೂರು: ಸರಕಾರಿ ವಿದ್ಯಾಸಂಸ್ಥೆಯಲ್ಲಿ ಕಲಿಯುವವರನ್ನು ತಾತ್ಸಾರದಿಂದ ನೋಡುವವರಿದ್ದಾರೆ. ಖಾಸಗಿ ಕಾಲೇಜಿಗೇ ತಮ್ಮ ಮಕ್ಕಳನ್ನು ಸೇರಿಸಬೇಕು, ಎಲ್ಲಿ ಒಳ್ಳೆಯ ಕೋಚಿಂಗ್ ಸಿಗುತ್ತದೆ ಎಂದು ಊರೂರು ಸುತ್ತುವವರೂ ಇದ್ದಾರೆ. ಅಂಥದ್ದರಲ್ಲಿ ಪ್ರಾಥಮಿಕ ಶಾಲೆಯಿಂದ ಪಿಯುಸಿವರೆಗೆ ಸರಕಾರಿ ಶಾಲೆಯಲ್ಲೇ ಕಲಿತ ವಿದ್ಯಾರ್ಥಿನಿಯೊಬ್ಬಳು ವಿಜ್ಞಾನ ವಿಭಾಗದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ದೊಡ್ಡ ಸಾಧನೆ ಮಾಡಿದ್ದಾಳೆ.

ಕಾಣಿಯೂರಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಶ್ರೀವಿದ್ಯಾ ಎನ್. ರಾಜ್ಯದಲ್ಲಿ ಸರಕಾರಿ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳಲ್ಲಿ ರಾಜ್ಯಕ್ಕೇ ಪ್ರಥಮ ಹಾಗೂ ಒಟ್ಟು ಫಲಿತಾಂಶದಲ್ಲಿ ರಾಜ್ಯಕ್ಕೆ ಐದನೇ ಸ್ಥಾನ ಗಳಿಸುವ ಮೂಲಕ ಗಮನ ಸೆಳೆದಿದ್ದಾಳೆ.

ಸಾಮಾನ್ಯವಾಗಿ ಪಿಯುಸಿ ವಿಜ್ಞಾನ ವಿಭಾಗದಲ್ಲಿ ರಾಂಕ್ ಬಂದವರು ಒಂದೋ ಇಂಜಿನಿಯರಿಂಗ್, ಇಲ್ಲದಿದ್ದರೆ ಮೆಡಿಕಲ್ ಓದುವ ಬಯಕೆಯನ್ನು ಹೊಂದಿರುತ್ತಾರೆ. ಅದಕ್ಕಾಗಿ ಮತ್ತೆ ಸಿಇಟಿ, ನೀಟ್, ಜೆಇಇ ಎಂದೆಲ್ಲಾ ತಯಾರಿ ನಡೆಸುತ್ತಾರೆ. ಆದರೆ...