ಭಾರತ, ಫೆಬ್ರವರಿ 12 -- ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) 2024ರ ಹೊಸ ವರ್ಷದ ಮೊದಲ ದಿನವೇ ತನ್ನ ವರ್ಷದ ಮೊದಲ ಉಡಾವಣೆಯನ್ನು ನೆರವೇರಿಸಿ, ವರ್ಷಕ್ಕೆ ಶುಭಾರಂಭ ನೀಡಿತು. ಅದಾದ ಬಳಿಕ, ಇಸ್ರೋ ಈಗ ತನ್ನ ಎರಡನೇ ಯೋಜನೆಗೆ ಸಂಪೂರ್ಣ ಸಿದ್ಧತೆ ನಡೆಸಿಕೊಂಡಿದ್ದು, ಫೆಬ್ರವರಿ 17ರ ಸಂಜೆ 5.30ಕ್ಕೆ ಮುಂದಿನ ಉಡಾವಣೆಗೆ ಸಜ್ಜಾಗಿದೆ. ಇದು ಈ ಮೊದಲು ಜಿಎಸ್ಎಲ್‌ವಿ ಎಂಕೆ2 ಎಂದು ಕರೆಯಲ್ಪಡುತ್ತಿದ್ದ ಜಿಎಸ್ಎಲ್‌ವಿ ರಾಕೆಟ್‌ನ 16ನೇ ಯೋಜನೆಯಾಗಿರಲಿದೆ. ಈ ಬಾರಿ, ಜಿಎಸ್ಎಲ್‌ವಿ ರಾಕೆಟ್ ತನ್ನೊಡನೆ ಇನ್‌ಸಾಟ್‌-3ಡಿಎಸ್ ಉಪಗ್ರಹವನ್ನೂ ಬಾಹ್ಯಾಕಾಶಕ್ಕೆ ಒಯ್ಯಲಿದೆ. ಈ ಉಪಗ್ರಹವನ್ನು ವಾತಾವರಣ ವೀಕ್ಷಣೆಯನ್ನು ಉತ್ತಮಗೊಳಿಸಲು ಮತ್ತು ಹೆಚ್ಚು ನಿಖರವಾಗಿ ಹವಾಮಾನ ಮುನ್ಸೂಚನೆ ನೀಡಲು ಉಡಾವಣೆಗೊಳಿಸಲಾಗುತ್ತಿದೆ. ಇದು ಪ್ರಾಕೃತಿಕ ವಿಕೋಪಗಳ ಕುರಿತು ಮುಂಚಿತವಾಗಿಯೇ ಮಾಹಿತಿ ನೀಡಲು ಅನುಕೂಲಕರವಾಗಿದೆ.

ಈ ಉಪಗ್ರಹ ಯೋಜನೆಗೆ ಭಾರತ ಸರ್ಕಾರದ ಭೂ ವಿಜ್ಞಾನ ಸಚಿವಾಲಯ ಹಣಕಾಸಿನ ನೆರವು ನೀಡಿದೆ. ಇನ್‌ಸಾಟ್‌-3ಡಿಎಸ್ ಉಪಗ್ರಹ ಈ ಮೊದ...