Bengaluru, ಏಪ್ರಿಲ್ 14 -- ಆಸ್ಪತ್ರೆಯಲ್ಲಿ ವೆಂಟಿಲೇಟರ್ ಏಕೆ ಬಳಸುತ್ತಾರೆ ಎಂಬ ಬಗ್ಗೆ ಮಂಗಳೂರು ಕೆಎಂಸಿ ಆಸ್ಪತ್ರೆಯ ಕ್ರಿಟಿಕಲ್ ಕೇರ್ ವಿಭಾಗದ ಮುಖ್ಯಸ್ಥ ಡಾ. ದತ್ತಾತ್ರೇಯ ಪ್ರಭು ವಿವರಿಸಿದ್ದಾರೆ. ಮುಂದಿರುವುದು ಅವರ ಬರಹ. ಆಸ್ಪತ್ರೆಯಲ್ಲಿನ ಐಸಿಯು ವಿಭಾಗ ಅನೇಕ ಜೀವರಕ್ಷಕ ಉಪಕರಣಗಳನ್ನು ಒಳಗೊಂಡಿರುತ್ತವೆ. ಈ ಉಪಕರಣಗಳ ಬಗ್ಗೆ ಸಾಮಾನ್ಯ ಜನರಲ್ಲಿ ಅರಿವು ಕಡಿಮೆ ಇರುವ ಹಿನ್ನೆಲೆ, ಸಾಕಷ್ಟು ಜನರು ತೀವ್ರ ನಿಗಾ ಘಟಕದ ಬಗ್ಗೆ ಭಯವನ್ನು ಹೊಂದಿದ್ದಾರೆ. ಐಸಿಯುನಲ್ಲಿ ಚಿಕಿತ್ಸೆ ನಡೆದಿದೆ ಎಂದರೆ ಆ ವ್ಯಕ್ತಿ ಬದುಕುಳಿಯುವುದೇ ಇಲ್ಲ ಎಂಬ ಅಪನಂಬಿಕೆ ಇದೆ. ಹೀಗಾಗಿ ಸಾಮಾನ್ಯವಾಗಿ ಗೊಂದಲ ಸೃಷ್ಟಿಸುವ ಇಸಿಎಮ್‌ಒ ( ಎಕ್ಸ್‌ಟ್ರಾಕೊರ್ಪೊರಿಯಲ್‌ ಮೆಂಬ್ರೆನ್‌ ಆಕ್ಸಿಜನೇಟರ್‌) ಮತ್ತು ವೆಂಟಿಲೇಟರ್‌ ಉಪಕರಣಗಳ ಬಳಕೆ, ಉಪಯೋಗವನ್ನು ತಿಳಿಯೋಣ.

ವೆಂಟಿಲೇಟರ್‌ ಎನ್ನುವ ಉಪಕರಣ ರೋಗಿಗೆ ತಾತ್ಕಾಲಿಕವಾಗಿ ಉಸಿರಾಟದ ನೆರವನ್ನು ನೀಡುತ್ತದೆ. ನ್ಯುಮೋನಿಯಾ, ಅಸ್ತಮಾ/ಸಿಒಪಿಡಿ, ಶ್ವಾಸನಾಳದ ಸಮಸ್ಯೆ ಮುಂತಾದ ಉಸಿರಾಟದ ವೈಫಲ್ಯಗಳಲ್ಲಿ ರ...