Bengaluru, ಜನವರಿ 31 -- Actor Kishore Kumar About Constitution: ನಟ ಕಿಶೋರ್‌ ಸಂವಿಧಾನದ ಬದಲಾವಣೆ ಯಾರಿಂದಲೂ ಸಾಧ್ಯ ಇಲ್ಲ ಎನ್ನುವ ಮೂಲಕ ಮೋದಿ ಸರ್ಕಾರದ ವಿರುದ್ಧ ಮತ್ತೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಇತ್ತೀಚೆಗಷ್ಟೇ ತಮ್ಮ ಮುಂಬರುವ ಹೊಸ ಸಿನಿಮಾ, 'ಅನಾಮಧೇಯ ಅಶೋಕಕುಮಾರ್‌' ಚಿತ್ರದ ಸುದ್ದಿಗೋಷ್ಠಿಯ ಬಳಿಕ ಸಂದರ್ಶದಲ್ಲಿ ಮಾತನಾಡಿದ ಅವರು, 'ಅವ್ರಪ್ಪ ಬಂದ್ರೂ ಸಂವಿಧಾನ ಬದಲಿಸೋಕೆ ಆಗಲ್ಲ' ಎಂದಿದ್ದಾರೆ. ಇಲ್ಲಿದೆ ಕಿಶೋರ್‌ ಅವರ ಪೂರ್ತಿ ಮಾತು.

"ಮನುವಾದವನ್ನು ಮೊದಲಿಂದಲೂ ಇವರು ಸಪೋರ್ಟ್‌ ಮಾಡಿಕೊಂಡೇ ಬಂದವರು. ಇದು ಎಲ್ಲಿಯವರೆಗೂ ಹೋಗುತ್ತೆ. ಹಿಂದೂ ರಾಷ್ಟ್ರ ಅಂತ ಮಾಡ್ತಾರೆ. ಮುಸ್ಲಿಮರು ಏನಾಗ್ತಾರೆ? ಅವರ ವಿರುದ್ಧ ಹೊಡೆದಾಡಿಕೊಂಡೇ ಬಿದ್ದಿರಬೇಕು. ಅದರಿಂದ ಯಾರಿಗಾದರೂ ಕೆಲಸ ಸಿಗುತ್ತಾ? ಕೆಲಸ ಸಿಗೋದು ಯಾರಿಗೆ ಎಂದರೆ, ಕೋಮು ದಂಗೆ ಮಾಡುವವರಿಗೆ, ಮಸೀದಿ ಮುಂದೆ ಡಿಜೆ ಮ್ಯೂಸಿಕ್‌ ಹಾಕಿಕೊಂಡು ಡಾನ್ಸ್‌ ಮಾಡುವಂಥವರಿಗೆ. ಒಬ್ಬರನ್ನೊಬ್ಬರು ಕೊಲ್ಲುವವರಿಗೆ. ಮಿಕ್ಕವರಿಗೆ ಏನು ಸಿಗುತ್ತೆ. ಇವರ ...