Bengaluru, ಏಪ್ರಿಲ್ 24 -- ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಬುಧವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 8ನೇ ಎಪಿಸೋಡ್‌ ಕಥೆ ಹೀಗಿದೆ. ಭದ್ರನಿಗೆ ಮದುವೆ ಆಗಲೆಂದು ಶಿವರಾಮೇಗೌಡ, ಮನೆ ದೇವರಿಗೆ ಮಾಡಿದ ಪೂಜೆ ಯಶಸ್ವಿಯಾಗಿದೆ. ತಾನು ಇಷ್ಟು ದಿನ ಪ್ರೀತಿಯಿಂದ ಸಾಕಿದ ಮೇಕೆ ಬಲಿಯಾಗುತ್ತಿದೆ ಎಂದು ಅಳುತ್ತಿದ್ದ ವಿದ್ಯಾ ನಂತರ ಅದರಿಂದಲೇ ಮಾಡಿದ ಬಾಡೂಟ ಸವಿದು ಖುಷಿಯಾಗುತ್ತಾಳೆ. ಮೇಕೆಯನ್ನು ಕಾಪಾಡು ಎಂದು ಬೇಡಿಕೊಂಡ ಹುಡುಗಿ ಈಗ ಇಷ್ಟು ಚೆನ್ನಾಗಿ ಊಟ ಮಾಡುತ್ತಿದ್ದಾಳೆ ಎಂದು ತಿಳಿದು ಭದ್ರ ಹುಸಿ ಕೋಪ ತೋರುತ್ತಾನೆ.

ಊಟ ಮಾಡಿದ ಜನರು ಅಡುಗೆಯನ್ನು ಹೊಗಳಿ ಹೋಗುತ್ತಾರೆ. ದೇವಿಗೆ ಮಂಗಳಾರತಿ ಮಾಡುವ ಸಮಯವಾಗುತ್ತದೆ. ವಿನಂತಿ ಎಲ್ಲೂ ಕಾಣದ್ದನ್ನು ನೋಡಿ ಎಲ್ಲಿ ಹೋದಳು ಅವಳು ಎಂದು ಮೋನಾ ಕೇಳುತ್ತಾಳೆ. ಭದ್ರನಿಗೆ ಒಳ್ಳೆಯದಾಗಲಿ ಎಂದು ವಿನಂತಿ ದೇವಿಗೆ ವಿಶೇಷ ಪೂಜೆ ಮಾಡಿಸುತ್ತಿದ್ದಾಳೆ. ಪೂಜಾ ಸಾಮಗ್ರಿಯನ್ನು ಕಾರಿನ ಬಳಿ ಬಿಟ್ಟು ಬಂದಿದ್ದಾಳೆ. ಅದನ್ನು ತರಲು ಹೋಗಿದ್ದಾಳೆ ಎಂದು ...