Bangalore, ಮಾರ್ಚ್ 6 -- ಬೆಂಗಳೂರು: ಸುಮಾರು 15 ಕೆಜಿ ಚಿನ್ನವನ್ನು ಕಳ್ಳಸಾಗಾಣೆ ಮಾಡುವಾಗ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ ಐ) ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದ ಕನ್ನಡದ ನಟಿ 32 ವರ್ಷದ ರನ್ಯಾ ರಾವ್‌ ಅವರನ್ನು ಕುರಿತು ಬಗೆದಷ್ಟೂ ಸ್ಫೋಟಕ ಮಾಹಿತಿಗಳು ಹೊರಬರುತ್ತಿವೆ. 12 ಕೋಟಿ ರೂ. ಮೌಲ್ಯದ 14.8 ಕೆಜಿ ಚಿನ್ನವನ್ನು ಕಳ್ಳಸಾಗಾಣೆ ಮಾಡುವಾಗ ಸಿಕ್ಕಿಬಿದ್ದಿದ್ದ ರನ್ಯಾ ಅವರನ್ನು ಮಾರ್ಚ್‌ 18 ರವರೆಗೆ ಪೊಲೀಸ್‌ ಕಸ್ಟಡಿಗೆಒಪ್ಪಿಸಲಾಗಿದೆ. ಇತ್ತೀಚೆಗೆ ಪತ್ತೆಯಾದ ಬಹುದೊಡ್ಡ ಕಳ್ಳಸಾಗಾಣೆ ಪ್ರಕರಣ ಇದಾಗಿದೆ. ಕನ್ನಡ ಚಿತ್ರರಂಗ, ಐಪಿಎಸ್‌ ಅಧಿಕಾರಿ ಕುಟುಂಬದ ನಂಟು ಇರುವ ಕಾರಣದಿಂದ ರನ್ಯಾ ರಾವ್‌ ಪ್ರಕರಣ ಭಾರೀ ಸದ್ದು ಮಾಡುತ್ತಿದೆ. ರನ್ಯಾರಾವ್‌ ಯಾರು, ಎಲ್ಲಿ ಹುಟ್ಟಿದ್ದು, ಅವರ ಶೈಕ್ಷಣಿಕ ಹಿನ್ನೆಲೆ ಏನು, ಕುಟುಂಬದ ವಿವರಗಳು ಇಲ್ಲಿವೆ.

ರನ್ಯಾ ರಾವ್‌ ಮೂಲತಃ ಚಿಕ್ಕಮಗಳೂರು ಜಿಲ್ಲೆಯವರು. ಕಾಫಿ ಎಸ್ಟೇಟ್‌ ದಂಪತಿ ಪುತ್ರಿ. ಕೌಟುಂಬಿಕ ಕಾರಣದಿಂದ ತಂದೆ ತಾಯಿ ಬೇರೆಯಾದರು. ತಾಯಿ ಆನಂತರ ಮದುವೆಯಾಗಿದ್ದು ಚಿಕ...