Bengauru, ಏಪ್ರಿಲ್ 21 -- ಬೆಂಗಳೂರು: ವಿವಿಧ ಕಾರಣಗಳಿಂದಾಗಿ ತೆಂಗಿನಕಾಯಿ ಬೆಲೆ ಏರುತ್ತಲೇ ಇದೆ. ಎರಡು ತಿಂಗಳ ಹಿಂದೆ 25 ರೂ. ಇದ್ದ ತೆಂಗಿನಕಾಯಿ ಬೆಲೆ ಇಂದು 65 ರೂ.ನಿಂದ 80 ರೂ. ತಲುಪಿದೆ. ಹೋಟೆಲ್‌ ತಿಂಡಿಗಳ ರುಚಿ ಹೆಚ್ಚಿಸುವುದೇ ಚಟ್ನಿ, ಅದರಲ್ಲೂ ಕಾಯಿ ಚಟ್ನಿ. ಬಲಿತ ತೆಂಗಿನಕಾಯಿ ಬಳಸಿದರೆ ರುಚಿ ಮತ್ತಷ್ಟು ಕಳೆಕಟ್ಟುತ್ತದೆ. ಕೆಲವು ಗ್ರಾಹಕರು ಎರಡೆರಡು ಬೌಲ್‌ ಚಟ್ನಿ ತಿನ್ನುವುದನ್ನು ನೋಡಿರುತ್ತೇವೆ. ಬೇಸಿಗೆಯಲ್ಲಿ ದೇಹಕ್ಕೆ ತೆಂಗಿನಕಾಯಿ ತಂಪು ನೀಡುತ್ತದೆ. ಬಹುತೇಕ ಸಾಂಬಾರ್‌, ಕರ್ರಿಗಳಿಗೆ ತೆಂಗಿನಕಾಯಿಯನ್ನು ಹೆಚ್ಚಾಗಿಯೇ ಬಳಸಲಾಗುತ್ತದೆ. ಹೋಟೆಲ್‌ಗಳಲ್ಲಿ ಮಾತ್ರವಲ್ಲ, ಸಭೆ ಸಮಾರಂಭ ಮತ್ತು ಮದುವೆ ನಡೆಯುವ ಛತ್ರಗಳಲ್ಲೂ ತೆಂಗಿನಕಾಯಿ ಬಳಕೆ ಕಡಿಮೆಯಾಗಿದೆ.

ಬೆಂಗಳೂರಿಗೆ ತುಮಕೂರು, ಹಾಸನ ಮಂಡ್ಯದಿಂದ ತೆಂಗಿನಕಾಯಿ ಸರಬರಾಜಾಗುತ್ತದೆ. ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಕೇರಳ ರಾಜ್ಯಗಳಿಂದಲೂ ತೆಂಗಿನಕಾಯಿ ಪೂರೈಕೆಯಾಗುತ್ತದೆ. ಎರಡು ಮೂರು ತಿಂಗಳ ಹಿಂದೆ 20-25 ರೂ.ಗೆ ಉತ್ತಮ ತೆಂಗಿನ ಕಾಯಿ ಸಿಗುತ್ತಿತ...