Bengaluru, ಮಾರ್ಚ್ 15 -- Puneeth Rajkumar: ಪುನೀತ್‍ ರಾಜಕುಮಾರ್ ಹುಟ್ಟುಹಬ್ಬಕ್ಕೆ ದಿನಗಣನೆ ಪ್ರಾರಂಭವಾಗಿದೆ. ಮಾರ್ಚ್‍ 17ರಂದು ಪುನೀತ್‍ ಅವರ 50ನೇ ಹುಟ್ಟುಹಬ್ಬವಿದೆ. ಈಗಾಗಲೇ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ಈ ಸಂಭ್ರಮವನ್ನು ಆಚರಿಸುವುದಕ್ಕೆ ತಯಾರಿ ನಡೆಸಿದ್ದಾರೆ. ಮೊದಲ ಹಂತವಾಗಿ ಈಗಾಗಲೇ 'ಅಪ್ಪು' ಚಿತ್ರ ಮರುಬಿಡುಗಡೆಯಾಗಿದೆ. ಪುನೀತ್‍ ಎಂದರೆ ಅವರ ಚಿತ್ರಗಳು ನೆನಪಿಗೆ ಬರುವುದರ ಜೊತೆಗೆ ಅವರ ಆಹಾರ ಪ್ರೀತಿಯ ಬಗ್ಗೆಯೂ ಸಾಕಷ್ಟು ಚರ್ಚೆಯಾಗಿದೆ. ಪುನೀತ್‍ ಅದೆಷ್ಟು ಆಸ್ವಾದಿಸಿ ತಿನ್ನುತ್ತಿದ್ದರು ಎಂದು ಅವರ ಜೊತೆಗೆ ಎರಡು ಚಿತ್ರಗಳಿಗೆ ಕೆಲಸ ಮಾಡಿರುವ ಪವನ್‍ ಒಡೆಯರ್ ಹೇಳಿಕೊಂಡಿದ್ದಾರೆ. ಡೈಲಿ ಮಾಧ್ಯಮ ಯೂಟ್ಯೂಬ್‍ ಚಾನಲ್‍ ಜೊತೆಗೆ ಮಾತನಾಡಿರುವ ಅವರು ಪುನೀತ್‍ ಕುರಿತು ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಈ ಕುರಿತು ಮಾತನಾಡಿರುವ ಪವನ್, 'ನಟಸಾರ್ವಭೌಮ' ಬಿಡುಗಡೆಯಾದ ಮೇಲೆ ಮೈಸೂರಿಗೆ ಒಂದು ಚಿತ್ರಮಂದಿರಕ್ಕೆ ಹೋಗಿದ್ದೆವು. ಅಲ್ಲಿ ಪುನೀತ್‍ ಅವರ ಅಭಿಮಾನಿಗಳು ಊಟ ಕಳಿಸಿಕೊಟ್ಟಿದ್ದರು. ಅದರಲ್ಲಿ ಬ...