ಭಾರತ, ಮಾರ್ಚ್ 16 -- ಪಾಕಿಸ್ತಾನ ಕ್ರಿಕೆಟ್‌ ತಂಡದ ವೇಗದ ಬೌಲರ್ ಅಮೀರ್ ಜಮಾಲ್ ಅವರಿಗೆ ಪಿಸಿಬಿಯು 1.4 ಮಿಲಿಯನ್ (ಪಾಕಿಸ್ತಾನ ರೂಪಾಯಿ) ರೂಪಾಯಿ (ಭಾರತದ 4,35,820 ರೂ.)ದಂಡ ವಿಧಿಸಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಆಟಗಾರನಿಗೆ ದಂಡದ ಬಿಸಿ ಮುಟ್ಟಿಸಿದೆ. ತಮ್ಮ ಟೆಸ್ಟ್ ಕ್ಯಾಪ್ ಮೇಲೆ '804' ಸಂಖ್ಯೆಯನ್ನು ಬರೆದ ಹಿನ್ನೆಲೆಯಲ್ಲಿ ಜಮಾಲ್ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗಿದೆ. ಈ ಸಂಖ್ಯೆಯು ಪ್ರಸ್ತುತ ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮತ್ತು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಬೆಂಬಲಿಸುವ ರಾಜಕೀಯ ಹೇಳಿಕೆ ಎಂದು ವ್ಯಾಖ್ಯಾನಿಸಲಾಗಿದೆ.

ಪಾಕಿಸ್ತಾನದ ಸಮಾ ಟಿವಿ ವರದಿಯಂತೆ, ಪಿಸಿಬಿಯ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಅನೇಕ ಆಟಗಾರರಿಗೆ ದಂಡ ವಿಧಿಸಿದೆ. ಆದರೆ ಜಮಾಲ್ ಕಠಿಣ ಶಿಕ್ಷೆಗೆ ಗುರಿಯಾಗಿದ್ದಾರೆ. '804' ಸಂಖ್ಯೆಯು ಇಮ್ರಾನ್ ಖಾನ್ ಅವರ ಖೈದಿ ಸಂಖ್ಯೆಯನ್ನು ಪ್ರತಿನಿಧಿಸುತ್ತದೆ ಎಂದು ಹೇಳಲಾಗಿದೆ. ಆಟಗಾರರು ರಾಜಕೀಯ ವಿಚಾರಗಳನ್ನ...