Bengaluru, ಮಾರ್ಚ್ 7 -- ಇಸ್ಲಾಂ ಧರ್ಮದ ಪ್ರಕಾರ,ರಂಜಾನ್ ತಿಂಗಳು ಬಹಳ ಪವಿತ್ರ ತಿಂಗಳು. ಈ ತಿಂಗಳಲ್ಲಿ,ಅಲ್ಲಾಹುಗೆ ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತದೆ. ಅಲ್ಲದೆ, ಇಸ್ಲಾಂ ಧರ್ಮೀಯರು ತಿಂಗಳಾದ್ಯಂತ ಉಪವಾಸ ಮಾಡುತ್ತಾರೆ. ಇಡೀ ದಿನ ಉಪವಾಸ ಮಾಡಿದ ನಂತರ,ಇಫ್ತಾರ್ ಸಮಯದಲ್ಲಿ ಮಾತ್ರ ಉಪವಾಸವನ್ನು ಮುರಿಯಲಾಗುತ್ತದೆ. ಈ ಸಮಯದಲ್ಲಿ,ಅನೇಕ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ.

ಪಾಲಕ್ ಪಕೋಡಾ ಪಾಕವಿಧಾನವನ್ನು ಪ್ರಯತ್ನಿಸಬಹುದು. ಈ ವಿಶೇಷ ಪಕೋಡಾಗಳನ್ನು ಇಫ್ತಾರ್‌ಗೆ ಸೇರಿಸಬಹುದು. ಇದನ್ನು ತಯಾರಿಸುವುದು ಕೂಡ ತುಂಬಾ ಸರಳ. ಪಾಲಕ್ ಪಕೋಡಾ ಹೇಗೆ ತಯಾರಿಸುವುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಬೇಕಾಗುವ ಸಾಮಗ್ರಿಗಳು:ಕಡಲೆಹಿಟ್ಟು-1ಕಪ್,ಅಕ್ಕಿ ಹಿಟ್ಟು- ಅರ್ಧ ಕಪ್, ಸಣ್ಣಗೆ ಹೆಚ್ಚಿದ ಈರುಳ್ಳಿ- ಕಾಲು ಕಪ್, ಹಸಿಮೆಣಸಿನಕಾಯಿ- 2, ಶುಂಠಿ-ಬೆಳ್ಳುಳ್ಳಿ ಪೇಸ್ಟ್- 1 ಚಮಚ, ಅರಿಶಿನ ಪುಡಿ- ಕಾಲು ಚಮಚ, ಕರಿಬೇವು- ಸ್ವಲ್ಪ, ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು, ಉಪ್ಪು ರುಚಿಗೆ ತಕ್ಕಷ್ಟು, ಚಾಟ್ ಮಸಾಲಾ- ಚಿಟಿಕೆ, ಪಾಲಕ್ ಸೊಪ್ಪು-...