ಭಾರತ, ಫೆಬ್ರವರಿ 10 -- Bengaluru Traffic Advisory: ಬೆಂಗಳೂರು ಅರಮನೆ ಮೈದಾನದಲ್ಲಿ ಫೆ 11 ರಿಂದ 14ರ ತನಕ ಇನ್‌ವೆಸ್ಟ್‌ ಕರ್ನಾಟಕ ಫೋರಂನ 'ಇನ್‌ವೆಸ್ಟ್ ಕರ್ನಾಟಕ-2025' ಗ್ಲೋಬಲ್ ಇನ್‌ವೆಸ್ಟರ್ ಮೀಟ್ ಕಾರ್ಯಕ್ರಮ ನಡೆಯಲಿದೆ. ಹೀಗಾಗಿ, ಅರಮನೆ ಮೈದಾನದ ಸುತ್ತಮುತ್ತ ಫೆ 11 ರಿಂದ ಫೆ 14ರ ತನಕ ಬೆಳಿಗ್ಗೆ 8 ರಿಂದ ಸಂಜೆ 6 ಗಂಟೆ ತನಕ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ, ಸಚಿವರು, ಉದ್ದಿಮೆದಾರರು, ವಿದೇಶಿ ಗಣ್ಯರು ಸೇರಿ ಸಾರ್ವಜನಿಕರು ಕೂಡ ಬರುವ ಕಾರಣ ಸಂಚಾರ ದಟ್ಟಣೆ ಹೆಚ್ಚಾಗಬಹುದು ಎಂಬ ಕಾರಣಕ್ಕೆ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಬಸ್ಸುಗಳಲ್ಲಿ ಬರುವವರು, ಬೆಂಗಳೂರು ನಗರದ ಒಳಭಾಗದಿಂದ ಕಾರ್ಯಕ್ರಮಕ್ಕೆ ಬರುವ ವಾಹನಗಳು: ಬಸವೇಶ್ವರ ಸರ್ಕಲ್-ಒಲ್ಡ್ ಹೈಗೌಂಡ್ ಜಂಕ್ಷನ್-ಕಲ್ಪನ- ಎಂ.ಸಿ.ಸಿ-ವಸಂತನಗರ ಅಂಡರ್ ಬ್ರಿಡ್ಜ್ ಬಲತಿರುವು ಪಡೆದು ಮುಖ್ಯ ಅರಮನೆ ಮೈದಾನದ ಮಾವಿನಕಾಯಿ ಮಂಡಿಯಲ್ಲಿ ವಾಹನಗಳನ್ನು ನಿಲುಗಡೆ ಮಾಡಿ ...