कोलकाता, ಏಪ್ರಿಲ್ 20 -- ಪಾಯಿಂಟ್ಸ್ ಟೇಬಲ್​ನಲ್ಲಿ ಅಗ್ರಸ್ಥಾನ ಪಡೆದಿರುವ ಗುಜರಾತ್ ಟೈಟಾನ್ಸ್ ಮತ್ತು 6ನೇ ಸ್ಥಾನದಲ್ಲಿರುವ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ (KKR) ತಂಡಗಳು ಇಂಡಿಯನ್ ಪ್ರೀಮಿಯರ್ ಲೀಗ್​ನ (IPL) 39ನೇ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಇನ್​ಫಾರ್ಮ್​ ಜಿಟಿ ವಿರುದ್ಧ ಏಪ್ರಿಲ್ 21ರಂದು ಕೆಕೆಆರ್​ ತಮ್ಮ ಬ್ಯಾಟ್ಸ್​​ಮನ್​ಗಳಿಂದ ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದೆ. ಇತ್ತ ಶುಭ್ಮನ್ ಗಿಲ್ ಪಡೆ ಮತ್ತೊಂದು ಗೆಲುವಿನ ಕನಸಿನಲ್ಲಿದೆ. ಪಂಜಾಬ್ ಕಿಂಗ್ಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ 112 ರನ್​ಗಳ ಗುರಿ ಬೆನ್ನಟ್ಟಲು ವಿಫಲವಾಗಿದ್ದ ಕೋಲ್ಕತಾ 95 ರನ್​ಗಳಿಗೆ ಆಲೌಟ್ ಆಗಿತ್ತು. ಬ್ಯಾಟ್ಸ್​​ಮನ್​ಗಳ ಈ ಕಳಪೆ ಪ್ರದರ್ಶನದ ಬಗ್ಗೆ ಕೆಕೆಆರ್​ ಮ್ಯಾನೇಜ್​ಮೆಂಟ್ ಚಿಂತೆಗೊಳಗಾಗಿದೆ.

ಆದಾಗ್ಯೂ, ಕೆಕೆಆರ್ ತನ್ನ ಮಾಜಿ ಸಹಾಯಕ ಕೋಚ್ ಅಭಿಷೇಕ್ ನಾಯರ್ ಅವರನ್ನು ತಂಡದ ನಿರ್ವಹಣೆಗೆ ಮತ್ತೆ ಸೇರಿಸಿಕೊಂಡಿದೆ. ನಾಯರ್ ಅವರನ್ನು ಇತ್ತೀಚೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ರಾಷ್ಟ್ರೀಯ ತಂಡದ ಸ...