ಭಾರತ, ಏಪ್ರಿಲ್ 27 -- ಬೆಂಗಳೂರು: ಇ-ಖಾತಾ ತಿದ್ದುಪಡಿಗೆ ಸಂಬಂಧಿಸಿ ತಿಂಗಳುಗಟ್ಟಲೇ ಕಾಯುತ್ತಿರುವ ಸಾರ್ವಜನಿಕರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇದೀಗ ಶುಭ ಸುದ್ದಿ ನೀಡಿದೆ. ಬಾಕಿ ಉಳಿದಿರುವ ಇ-ಖಾತಾ ತಿದ್ದುಪಡಿ ಅರ್ಜಿಗಳನ್ನು ತೆರವುಗೊಳಿಸಲು ಬಿಬಿಎಂಪಿ ಎಫ್​ಐಎಫ್​ಒ - ಮೊದಲು ಒಳಗೆ, ಮೊದಲು ಹೊರಗೆ (First In, First Out) ಎಂಬ ವ್ಯವಸ್ಥೆ ಜಾರಿಗೆ ಚಿಂತನೆ ನಡೆಸಿದೆ. ಬಿಬಿಎಂಪಿಗೆ ಪ್ರತಿದಿನ ಸುಮಾರು 3,000 ಆಸ್ತಿ ಮಾಲೀಕರು ಇ-ಖಾತಾಗೆ ಅರ್ಜಿ ಸಲ್ಲಿಸುತ್ತಿದ್ದು, ಈ ವ್ಯವಸ್ಥೆಯ ಮೂಲಕ ಶೇ 90ರಷ್ಟು ಖಾತೆಗಳಿಗೆ 24 ಗಂಟೆಗಳಲ್ಲಿ ಪರಿಹಾರ ಒದಗಿಸಬಹುದಾಗಿದೆ.

ಇ-ಖಾತಾ ತಿದ್ದುಪಡಿಗೆ ಅರ್ಜಿ ಸಲ್ಲಿಸಿ ತಿಂಗಳುಗಟ್ಟಲೇ ಕಚೇರಿಗೆ ಅಲೆದಾಡಿದರೂ ಪರಿಹಾರ ಮಾತ್ರ ಸಿಗುತ್ತಿಲ್ಲ. ಸಬೂಬು ಹೇಳುತ್ತಿದ್ದಾರೆಯೇ ವಿನಃ ಅಧಿಕಾರಿಗಳು ಪರಿಹಾರ ಒದಗಿಸುವ ಗೋಜಿಗೆ ಹೋಗುತ್ತಿಲ್ಲ ಎನ್ನುವುದು ಸಾರ್ವಜನಿಕರ ದೂರು. ತಿದ್ದುಪಡಿಗೆ ಸಂಬಂಧಿಸಿ ದೂರುಗಳು ಹೆಚ್ಚಾದ ಬೆನ್ನಲ್ಲೇ ಇದನ್ನು ಪರಿಹರಿಸಲು, ಬಿಬಿಎಂಪಿ ಅಧಿಕಾರಿಗಳು ಆಂತರಿಕವ...