ಭಾರತ, ಜೂನ್ 1 -- ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್ ಆಗಿರುವ ಕೆನರಾ ಬ್ಯಾಂಕ್, ತನ್ನೆಲ್ಲಾ ಉಳಿತಾಯ ಬ್ಯಾಂಕ್ (Savings bank -SB) ಖಾತೆಗಳಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳದೆ ಇರುವುದಕ್ಕೆ ವಿಧಿಸುತ್ತಿದ್ದ ದಂಡ ಶುಲ್ಕವನ್ನು ಮನ್ನಾ ಮಾಡಿದೆ. ಉಳಿತಾಯ ಖಾತೆಗಳ ಜೊತೆಗೆ ವೇತನ ಖಾತೆಗಳು, ಅನಿವಾಸಿ ಭಾರತೀಯ (ಎನ್‌ಆರ್‌ಐ) ಎಸ್‌ಬಿ ಖಾತೆಗಳನ್ನೂ ಸೇರಿದಂತೆ ಎಲ್ಲಾ ರೀತಿಯ ಎಸ್‌ಬಿ ಅಕೌಂಟ್‌ಗಳ ಮೇಲಿನ ಕನಿಷ್ಠ ತಿಂಗಳ ಮೊತ್ತ (ಎಎಂಬಿ) ಕಾಯ್ದುಕೊಳ್ಳದೆ ಇರುವುದಕ್ಕೆ ವಿಧಿಸುತ್ತಿದ್ದ ದಂಡ ಶುಲ್ಕವನ್ನು ಸಂಪೂರ್ಣವಾಗಿ ಮನ್ನಾ ಮಾಡುವುದಾಗಿ ಘೋಷಿಸಿದೆ.

2025ರ ಜೂನ್ 01ರಿಂದ ಅನ್ವಯಿಸುವಂತೆ ಕೆನರಾ ಬ್ಯಾಂಕ್ ಎಲ್ಲಾ ರೀತಿಯ ಎಸ್‌ಬಿ ಖಾತೆಗಳಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳದೆ ಇರುವುದಕ್ಕೆ ಯಾವುದೇ ರೀತಿಯ ದಂಡ ವಿಧಿಸುವುದಿಲ್ಲ. ಇದರಿಂದಾಗಿ ಕೆನರಾ ಬ್ಯಾಂಕ್‌ನ ಎಸ್‌ಬಿ ಗ್ರಾಹಕರು ಇನ್ನುಮುಂದೆ ತಮ್ಮ ಖಾತೆಯಲ್ಲಿ ಕನಿಷ್ಠ ಮೊತ್ತ (ಎಎಂಬಿ) ಕಾಯ್ದುಕೊಳ್ಳದೆ ಇರುವುದಕ್ಕೆ ದಂಡ ಅಥವಾ ಶುಲ್ಕ ಕಟ್ಟುವ ಪ್ರಮೇಯ ಎದುರಾಗುವುದಿ...