Bangalore, ಮಾರ್ಚ್ 10 -- ಇನ್ಫೋಸಿಸ್‌ ನಾರಾಯಣ ಮೂರ್ತಿ, ಸುಧಾ ಮೂರ್ತಿ ಅವರದ್ದು ಸ್ಪೂರ್ತಿದಾಯಕ ವ್ಯಕ್ತಿತ್ವ. ಇವರ ಬದುಕಿನ ಕಥೆ, ಸಾಧನೆ, ಲವ್‌ ಸ್ಟೋರಿ ಯಾವುದೇ ಸಿನಿಮಾದ ಕಥೆಗಿಂತಲೂ ಕಡಿಮೆಯಿಲ್ಲ. 2021ರಲ್ಲಿಯೇ ನಿರ್ದೇಶಕಿ ಅಶ್ವಿನಿ ಅಯ್ಯರ್‌ ತಿವಾರಿ "ಸುಧಾ ಮೂರ್ತಿ ಮತ್ತು ಎನ್‌ಆರ್‌ ನಾರಾಯಣ ಮೂರ್ತಿಯ ಬದುಕಿನ ಕಥೆಯನ್ನು ಆಧರಿಸಿದ ಸಿನಿಮಾ ನಿರ್ದೇಶಿಸುವುದಾಗಿ ಘೋಷಿಸಿದ್ದರು. ಈ ಬಯೋಪಿಕ್‌ ಕುರಿತು ಘೋಷಿಸಿ ಈಗಾಗಲೇ ನಾಲ್ಕು ವರ್ಷಗಳು ಕರೆದಿವೆ. ಈಕೆಯ ಕಡೆಯಿಂದ ಯಾವುದೇ ಅಪ್‌ಡೇಟ್‌ ದೊರಕಿಲ್ಲ. ಈ ವಿಳಂಬದ ಕುರಿತು ನಿರ್ದೇಶಕಿ ಅಯ್ಯರ್‌ ಮಾಹಿತಿ ನೀಡಿದ್ದಾರೆ. ವಿಳಂಬವಾದರೂ ಪರವಾಗಿಲ್ಲ. ಇವರ ಜೀವನದ ಕಥೆಯನ್ನು ಪ್ರೆಸೆಂಟ್‌ ಮಾಡುವ ಕುರಿತು ಕೆಲಸ ಮಾಡುತ್ತಿರುವುದಾಗಿ ಅವರು ಹೇಳಿದ್ದಾರೆ.

ನ್ಯೂಸ್‌18ಗೆ ನೀಡಿದ ಸಂದರ್ಶನದಲ್ಲಿ ತನ್ನ ಯೋಜನೆಗಳ ಕುರಿತು ನಿರ್ದೇಶಕಿ ಅಶ್ವಿನಿ ಅಯ್ಯರ್‌ ಮಾತನಾಡಿದ್ದಾರೆ. "ನಾನು ಕೆಲವು ಸಿನಿಮಾಗಳಿಗೆ ನಿರ್ದೇಶನ ಮಾಡುತ್ತಿದ್ದೇನೆ" ಎಂದು ಅವರು ಹೇಳಿದ್ದಾರೆ. ಆದರೆ, ಆ ಸಿನಿಮಾಗ...