ಭಾರತ, ಮಾರ್ಚ್ 4 -- ಎರಡು ವರ್ಷಗಳ ಕಾಲ ಡೇಟಿಂಗ್ ಮಾಡಿದ್ದ ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ಬೇರ್ಪಟ್ಟಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇನ್ನು ಮುಂದಿನ ದಿನಗಳಲ್ಲೂ ಇವರಿಬ್ಬರು ಜತೆಗಿರುತ್ತಾರೆ. ಆದರೆ, ಉತ್ತಮ ಸ್ನೇಹಿತರಾಗಿರುತ್ತಾರೆ ಎಂದು ಹೇಳಲಾಗುತ್ತಿದೆ. ಡೇಟಿಂಗ್ ಮಾಡುತ್ತಿಲ್ಲ ಎಂದ ಮಾತ್ರಕ್ಕೆ ಒಬ್ಬರ ಮೇಲೆ ಇನ್ನೊಬ್ಬರು ದೂರು ಹೇಳಿಕೊಂಡಿಲ್ಲ. ಅಥವಾ ಯಾವುದೇ ಕೆಟ್ಟ ಅಭಿಪ್ರಾಯಗಳನ್ನೂ ಸಹ ಹಂಚಿಕೊಂಡಿಲ್ಲ. ತಾವು ಯಾವ ಕಾರಣಕ್ಕೆ ದೂರಾಗುತ್ತಿದ್ದೇವೆ ಎಂಬ ವಿಚಾರವನ್ನೂ ತಿಳಿಸಿಲ್ಲ. ಆದರೆ ಇನ್ನು ಮುಂದಿನ ದಿನಗಳಲ್ಲಿ ಕೇವಲ ಉತ್ತಮ ಸ್ನೇಹಿತರಾಗಿ ಮಾತ್ರ ಇರುತ್ತಾರೆ ಎಂದು 'ಇಂಡಿಯಾ ಟುಡೆ' ಜಾಲತಾಣ ವರದಿ ಮಾಡಿದೆ

2023 ರಲ್ಲಿ ಲಸ್ಟ್ ಸ್ಟೋರೀಸ್ 2 ಬಿಡುಗಡೆಯಾದಾಗ ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ತಾವಿಬ್ಬರೂ ಡೇಟಿಂಗ್ ಮಾಡುತ್ತಿರುವ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಇವರಿಬ್ಬರೂ ತಮ್ಮ ಸಂಬಂಧವನ್ನು ಗೌಪ್ಯವಾಗಿ ಇಟ್ಟಿರಲಿಲ್ಲ. ಆದರೆ ಪರಸ್ಪರ ಗೌಪ್ಯತೆಗೆ ಗೌರವ ನೀಡುತ್ತಿದ್ದರು. ನನ್...