ಭಾರತ, ಮಾರ್ಚ್ 24 -- ಸಿಎಸ್‌ಕೆ ಮತ್ತು ಮುಂಬೈ ಇಂಡಿಯನ್ಸ್‌ ತಂಡಗಳ ನಡುವಿನ ಐಪಿಎಲ್‌ ಪಂದ್ಯದಲ್ಲಿ ಹೆಚ್ಚು ಗಮನ ಸೆಳೆದ ಯುವ ಆಟಗಾರ ಈತ. ಹೆಸರು ವಿಘ್ನೇಶ್ ಪುತ್ತೂರ್‌ (Vignesh Puthur). ಇದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಅಲ್ಲ.‌ ಈತ ಕೇರಳದ ಹುಡುಗ. ಸಿಎಸ್‌ಕೆ ತಂಡದ ಚೇಸಿಂಗ್‌ ವೇಳೆ ಮುಂಬೈ ತಂಡಕ್ಕೆ ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಬಂದ ಬೌಲರ್, ಅಮೋಘ ಬೌಲಿಂಗ್‌ ಪ್ರದರ್ಶನ ನೀಡಿ ಸುದ್ದಿಯಲ್ಲಿದ್ದಾನೆ. 24 ವರ್ಷದ ಯುವಕ, ಐಪಿಎಲ್‌ ಪದಾರ್ಪಣೆ ಪಂದ್ಯದಲ್ಲೇ ಮಿಂಚು ಹರಿಸಿದ್ದಾನೆ. ಆಡಿದ ಮೊದಲ ಪಂದ್ಯದಲ್ಲಿ ಘಟಾನುಘಟಿ ಬ್ಯಾಟರ್‌ಗಳಿಗೆ ಬೌಲಿಂಗ್‌ ಮಾಡಿ ಮೇಲಿಂದ ಮೇಲೆ ವಿಕೆಟ್‌ ಪಡೆದಿದ್ದಾನೆ.

ಅರ್ಧಶತಕ ಸಿಡಿಸಿ ಕ್ರೀಸ್‌ಕಚ್ಚಿ ಆಡುತ್ತಿದ್ದ ಸಿಎಸ್‌ಕೆ ನಾಯಕ ರುತುರಾಜ್‌ ಗಾಯಕ್ವಾಡ್‌, ಈತನ ಸ್ಪಿನ್ ತಂತ್ರ ಮಾಡಿಕೊಳ್ಳಲಾಗದೆ ಕ್ಯಾಚ್‌ ಕೊಟ್ಟು ಔಟಾಗ್ತಾರೆ. ಅವರ ಬೆನ್ನಲ್ಲೇ, ಸ್ಪಿನ್‌ ದಾಳಿಯನ್ನು ಸಮರ್ಥವಾಗಿ ಎದುರಿಸಬಲ್ಲ ಶಿವಂ ದುಬೆ ಕೂಡಾ ಕ್ಯಾಚ್‌ ನೀಡಿ ವಿಕೆಟ್‌ ಚೆಲ್ಲುತ್ತಾರೆ. ಕೆಲವೇ ನಿಮಿಷಗಳಲ್ಲಿ ...