Bengaluru, ಮಾರ್ಚ್ 20 -- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಬುಧವಾರ ಮಾರ್ಚ್ 19ರ ಸಂಚಿಕೆಯಲ್ಲಿ ಭಾಗ್ಯ ಮತ್ತು ತನ್ಮಯ್‌ನನ್ನು ಹುಡುಕಿಕೊಂಡು ಅವನ ಗೆಳೆಯ ಮನೆಗೆ ಬಂದಿದ್ದಾನೆ. ಬಂದವನೇ ಅವಳ ಕೈರುಚಿ ಮತ್ತು ಅಡುಗೆಯನ್ನು ಹೊಗಳಿದ್ದಾನೆ. ಭಾಗ್ಯಕ್ಕ ತುಂಬಾ ಚೆನ್ನಾಗಿ ಅಡುಗೆ ಮಾಡುತ್ತಾರೆ, ಅವರ ಕೈರುಚಿ ತಿಂದರೆ ಮನೆಯಲ್ಲಿ ಅಮ್ಮ ಮಾಡುವ ಅಡುಗೆ ನೆನಪಾಗುತ್ತದೆ. ಎಲ್ಲರಿಗೂ ಭಾಗ್ಯ ಮಾಡುವ ಅಡುಗೆ ಎಂದರೆ ಇಷ್ಟ. ಹೀಗಾಗಿ ಎಲ್ಲರೂ ಅದನ್ನು ಇಷ್ಟಪಡುತ್ತಾರೆ ಎಂದು ಕುಸುಮಾ ಹೇಳುತ್ತಾಳೆ. ಅಷ್ಟರಲ್ಲಿ ಭಾಗ್ಯ, ಮನೆಯಲ್ಲಿ ಪುಳಿಯೋಗರೆ ಮಾಡಿದ್ದು, ಅದನ್ನೇ ಬಾಕ್ಸ್‌ಗೆ ಹಾಕಿ ಕೊಡುತ್ತಾಳೆ, ನಿಮ್ಮ ಅಡುಗೆ ನಮ್ಮ ಹಾಸ್ಟೆಲ್‌ನ ಎಲ್ಲ ಹುಡುಗರಿಗೆ ಇಷ್ಟವಾಗಬಹುದು ಎಂದು ಹೇಳುತ್ತಾನೆ.

ಅವನು ಬಾಕ್ಸ್ ತೆಗೆದುಕೊಂಡು ವಾಪಸ್ ಹೋಗುತ್ತಾನೆ. ಅವನು ಅತ್ತ ಹೋಗುತ್ತಲೇ ಭಾಗ್ಯ, ತನ್ಮಯ್‌ನನ್ನು ಕರೆದುಕೊಂಡು ಹೊರಟಿದ್ದಾಳೆ. ಎಂದಿನಂತೆ ಅವನನ್ನು ಸ್ಕೂಲ್‌ಗೆ ಬಿಟ್ಟ ಭಾಗ್ಯ, ನಂತರ ಅಲ್ಲಿಂದ ರೆಸಾರ್ಟ್‌ಗೆ ಹೋಗುತ್ತಾಳೆ. ಅ...