Bengaluru, ಏಪ್ರಿಲ್ 20 -- ಸೋಷಿಯಲ್‌ ಮೀಡಿಯಾದಲ್ಲಿ ತಮ್ಮದೇ ಆದ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿರುವ ವರ್ತೂರು ಸಂತೋಷ್‌, ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ಬಿಗ್‌ ಬಾಸ್‌ನಲ್ಲಿ ಭಾಗವಹಿಸಿ ಬಂದ ಬಳಿಕ ಹೆಚ್ಚು ಮುನ್ನೆಲೆಗೆ ಬಂದವರು ಈ ವರ್ತೂರು ಸಂತೋಷ್‌. ಅಭಿಮಾನಿ ವಲಯದಲ್ಲಿ ಹಳ್ಳಿಕಾರ್‌ ಒಡೆಯ ಎಂದೇ ಫೇಮಸ್‌ ಆದ ಸಂತೋಷ್‌, ಇದೀಗ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಇನ್ನೇನು ಇದೇ ವರ್ಷದಲ್ಲಿ ಮದುವೆ ಆಗಲಿದ್ದಾರೆ. ಈ ವಿಚಾರವನ್ನು ಸ್ವತಃ ತಾವೇ ಹೇಳಿಕೊಂಡ ವಿಡಿಯೋ ಅವರ ಇನ್‌ಸ್ಟಾಗ್ರಾಂನಲ್ಲಿದೆ.

ವರ್ತೂರು ಸಂತೋಷ್‌ ಅವರ ಸ್ನೇಹಿತ ಶ್ರೀನಿವಾಸ್‌ ಎಂಬುವವರು ಖುದ್ದು ಸಂತೋಷ್‌ ಅವರ ಜೊತೆಗೆ ನಿಂತು, ತಿಗಳರ ತಮಿಳು ಭಾಷೆಯಲ್ಲಿ ಮದುವೆ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ಇದೇ ವರ್ಷ ನಮ್ಮ ವರ್ತೂರು ಸಂತೋಷ್‌ ಮದುವೆ ಆಗುವುದು ಖಚಿತ. ಎಲ್ಲ ನಮ್ಮ ತಿಗಳ ವನ್ಯ ಕುಲ ಕ್ಷತ್ರೀಯ ಜನರು, ನಮ್ಮ ವರ್ತೂರು ಸಂತೋಷ್‌ಗೆ ಆಶೀರ್ವಾದ ಮಾಡಬೇಕು ಎಂದು ನಾನು ಕೇಳಿಕೊಳ್ಳುತ್ತೇನೆ. ನೂರು ವರ್ಷ...