ಭಾರತ, ಮಾರ್ಚ್ 28 -- ಕ್ರಿಕೆಟ್‌ನ ಚಾಣಾಕ್ಷ ನಾಯಕನೆಂದು ಹೆಸರಾಗಿರುವವರು ಎಂಎಸ್‌ ಧೋನಿ. ಸ್ಟಂಪ್‌ಗಳ ಹಿಂದೆ ನಿಖರ ಕೆಲಸ, ಸ್ಟಂಪೌಟ್‌ ಮಾಡುವಲ್ಲಿ ಜಾಣತನ, ನಿರ್ಧಾರಗಳಲ್ಲಿ ಸ್ಪಷ್ಟತೆ ಮಾಹಿ ಆಟದ ಸಾಮಾನ್ಯ ಭಾಗ. ಇನ್ನು ಡಿಆರ್‌ಎಸ್ (DRS) ವಿಮರ್ಶೆಗೆ ಧೋನಿ ಮನವಿ ಮಾಡಿದರೆಂದರೆ, ಅದು ಯಶಸ್ವಿಯಾಯ್ತು ಎಂದೇ ಅರ್ಥ. ಡಿಆರ್‌ಎಸ್‌ ಎಂದರೆ ಡಿಸಿಷನ್‌ ರಿವ್ಯೂ ಸಿಸ್ಟಮ್ ಎಂದು ಅರ್ಥ.‌ ಅಂದರೆ ಅಂಪೈರ್‌ ತೀರ್ಮಾನದ ವಿರುದ್ಧ ಆಟಗಾರರು ಮೂರನೇ ಅಂಪೈರ್‌ಗೆ ಸಲ್ಲಿಸುವ ಮಲ್ಮನವಿ. ಧೋನಿ ಏನಾದರೂ ರಿವ್ಯೂ ಮಾಡಿದರು ಎಂದರೆ ಅದರಲ್ಲಿ ಪರಿಪಕ್ವತೆ ಇದೆ ಎಂದೇ ಅರ್ಥ. ಹೀಗಾಗಿ ಅಭಿಮಾನಿಗಳು ಡಿಆರ್‌ಎಸ್‌ ಅನ್ನು ಧೋನಿ ರಿವ್ಯೂ ಸಿಸ್ಟಮ್‌ ಎಂದೇ ಹೇಳುವುದು ಸಾಮಾನ್ಯ.

ಬಹುಶಃ ಇದೇ ಮೊದಲ ಬಾರಿಗೆ ಎಂಬಂತೆ ಧೋನಿ ತೆಗೆದುಕೊಂಡ ರಿವ್ಯೂ ಪ್ಲಾಪ್‌ ಆಗಿದೆ. ಅರ್ಥಾತ್‌ ವಿಫಲವಾಗಿದೆ. ಮಾರ್ಚ್‌ 28ರ ಗುರುವಾರ ಚೆನ್ನೈನಲ್ಲಿ ನಡೆದ ಐಪಿಎಲ್ 2025ರ ಆವೃತ್ತಿಯ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್‌ (Chen...