ಭಾರತ, ಫೆಬ್ರವರಿ 8 -- ಪ್ರೇಮಿಗಳ ದಿನವೇ ಪ್ರೀತಿಸಿದವರಿಗೆ ತಮ್ಮ ಪ್ರೀತಿ ಹೇಳಿಕೊಳ್ಳಬೇಕೆಂದು ಬಹಳ ದಿನಗಳಿಂದ ಹರೆಯದ ಮನಸ್ಸುಗಳಲ್ಲಿ ಚಡಪಡಿಕೆ, ಕಾತರ, ಉತ್ಸಾಹ ಇರುತ್ತದೆ. ತನ್ನ ಪ್ರೀತಿಯನ್ನು ವಿಶೇಷವಾಗಿ ವ್ಯಕ್ತಪಡಿಸಬೇಕು ಎಂದು ಹಾತೊರೆಯುವುದು ಪ್ರೇಮಿಗಳ ಗುಣ. ಇಂತಹ ದಿನವನ್ನು ಭರ್ಜರಿಯಾಗಿ ಸಂಭ್ರಮಿಸಬಹುದು. ಸರಳವಾಗಿ, ಅದೇ ಹೊತ್ತಿಗೆ ಆರ್ಥಪೂರ್ಣವಾಗಿಯೂ ಖುಷಿಪಡಬಹುದು. ಅದಕ್ಕಾಗಿ ಹಲವಾರು ದಾರಿಗಳಿವೆ.

ಪ್ರಪಂಚದೆಲ್ಲೆಡೆ, ಪ್ರೇಮಿಗಳ ದಿನವನ್ನು ವಿವಿಧ ರೀತಿಗಳಲ್ಲಿ ಆಚರಿಸುತ್ತಾರೆ. ಕೆಲ ಏಕಮುಖಿ (ಒನ್‌ಸೈಡ್) ಪ್ರೇಮಿಗಳು ತಮ್ಮ ಪ್ರೀತಿ ಹೇಳಿಕೊಳ್ಳಲು ಈ ದಿನಕ್ಕಾಗಿಯೇ ಕಾಯುತ್ತಿರುತ್ತಾರೆ. ಪ್ರೇಮ ಪ್ರಸ್ತಾವದ (ಲವ್ ಪ್ರೊಪೋಸಲ್) ಒಂದು ಘಳಿಗೆಯನ್ನು ಸದಾ ನೆನಪಿನಲ್ಲ ಇರುವಂತೆ ಮಾಡಬೇಕೆಂಬುದು ಎಲ್ಲ ಪ್ರೇಮಿಗಳ ಕನಸಾಗಿರುತ್ತದೆ. ಚೆಂದದ ಉಡುಗೊರೆಗಳನ್ನು ಕೊಡುವುದು, ಹಳೆಕಾಲದ ಪ್ರೀತಿಯ ಹಾಗೆ ಪ್ರೇಮಪತ್ರಗಳನ್ನು ಬರೆಯುವುದು, ಫ್ಯಾನ್ಸಿ ಡಿನ್ನರ್ ಡೇಟ್‌ಗಳಿಗೆ ಹೋಗುವುದು, ವಿಶಿಷ್ಟ ರೀತಿಯಲ್ಲಿ ಪ್ರೀತಿಸುತ್ತಿದ...