ಭಾರತ, ಫೆಬ್ರವರಿ 13 -- ಸಂಗಾತಿಯೊಂದಿಗೆ ಪ್ರೇಮಿಗಳ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಬಯಸುತ್ತೀರಾ. ಇದಕ್ಕಾಗಿ ನೀವು ಸುಂದರ ಸ್ಥಳವನ್ನು ಹುಡುಕುತ್ತಿರಬಹುದು. ಕರ್ನಾಟಕದ ಮಡಿಕೇರಿಗಿಂತ ಉತ್ತಮ ಸ್ಥಳ ಬೇಕೇ? ಭಾರತದ ಸ್ಕಾಟ್ಲೆಂಡ್ ಎಂದೇ ಕರೆಯಲಾಗುವ ಕೊಡಗು ಬಹಳ ಸುಂದರ ತಾಣ. ನೀವಿಲ್ಲಿಗೆ ಕಾಲಿಟ್ಟರೆ ಯಾಕೆ ಈ ಸ್ಥಳ ಇಷ್ಟೊಂದು ಸುಂದರವಾಗಿದೆ ಎಂದು ನಿಮಗೆ ಅರ್ಥವಾಗುತ್ತದೆ.

ಕೊಡಗು ತನ್ನ ಹಚ್ಚ ಹಸಿರಿನ ಕಾಫಿ ತೋಟಗಳು, ಪ್ರಕೃತಿಯ ಸೌಂದರ್ಯ, ಮಂಜಿನಿಂದ ಆವೃತವಾದ ಪರ್ವತಗಳು, ಜಲಪಾತಗಳು ಮತ್ತು ಆಹ್ಲಾದಕರ ಹವಾಮಾನಕ್ಕೆ ಹೆಸರುವಾಸಿಯಾಗಿದೆ. ಇಲ್ಲಿರುವ ಪ್ರತಿಯೊಂದು ಸ್ಥಳವೂ ಸಂಗಾತಿಯೊಂದಿಗೆ ಖುಷಿಯ ಕ್ಷಣಗಳನ್ನು ಕಳೆಯಲು ಉತ್ತಮವಾಗಿದೆ.

ಮಾಂದಲಪಟ್ಟಿ: ಇದು ಕೊಡಗು ಜಿಲ್ಲೆಯಲ್ಲಿರುವ ಒಂದು ಭವ್ಯ ಮತ್ತು ವಿಶಿಷ್ಟ ತಾಣವಾಗಿದ್ದು, ಮಡಿಕೇರಿಯಿಂದ 20 ಕಿ.ಮೀ ದೂರದಲ್ಲಿದೆ. ಈ ಸ್ಥಳವು ಸೂರ್ಯೋದಯ ಮತ್ತು ಸೂರ್ಯಾಸ್ತದ ವೀಕ್ಷಣೆಗೆ ಹೆಸರುವಾಸಿಯಾಗಿದೆ. ಕೊಡಗಿನ ಅತ್ಯುತ್ತಮ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿರುವ ಇದು ನಿಧಾನವಾಗಿ...