Bengaluru, ಏಪ್ರಿಲ್ 25 -- ಯಾವ್ಯಾವ ಹಾಡು ಹೇಗೆ ಸೃಷ್ಟಿಯಾಗುತ್ತದೋ, ಯಾವ ಟ್ಯೂನ್‍ ಎಲ್ಲಿ ಹುಟ್ಟುತ್ತದೋ ಹೇಳುವುದು ಕಷ್ಟ. ಅದೇ ರೀತಿ, 'ಕುಲದಲ್ಲಿ ಕೀಳ್ಯಾವುದೋ' ಚಿತ್ರದ ಶೀರ್ಷಿಕೆ ಗೀತೆಯು ಬಾಥ್‍ರೂಂನಲ್ಲಿ ಹುಟ್ಟಿತಂತೆ. ಹಾಗಂತ ಖುದ್ದು ನಿರ್ದೇಶಕ ರಾಮನಾರಾಯಣ್‍ ಹೇಳಿಕೊಂಡಿದ್ದಾರೆ. 'ಕುಲದಲ್ಲಿ ಕೀಳ್ಯಾವುದೋ' ಚಿತ್ರದ ಎರಡು ಹಾಡುಗಳು ಈಗಾಗಲೇ ಬಿಡುಗಡೆಯಾಗಿವೆ. ಇದೀಗ ಚಿತ್ರದ ಶೀರ್ಷಿಕೆ ಗೀತೆ, ಡಾ. ರಾಜಕುಮಾರ್ ಹುಟ್ಟುಹಬ್ಬದ ದಿನ ಬಿಡುಗಡೆ ಮಾಡಲಾಗಿದೆ. 'ವೃಕ್ಷಮಾತೆ' ಸಾಲುಮರದ ತಿಮ್ಮಕ್ಕ ಹಾಡು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಈ ಹಾಡಿನ ಕುರಿತು ಮಾತನಾಡಿರುವ ನಿರ್ದೇಶಕ ರಾಮನಾರಾಯಣ್‍, ''ಕುಲದಲ್ಲಿ ಕೀಳ್ಯಾವುದೋ' ಸಾಲಿನಲ್ಲೇ ಇನ್ನೊಂದು ಹಾಡು ಸಂಯೋಜಿಸುವುದು ಸವಾಲಿನ ಕೆಲಸವಾಗಿತ್ತು. ಏನು ಬರೆದರೂ ಸಮಾಧಾನವಾಗುತ್ತಿರಲಿಲ್ಲ. ಏನೋ ಗೊಂದಲ ಗೊತ್ತು. ಅಷ್ಟರಲ್ಲಿ ಸಂಗೀತ ನಿರ್ದೇಶಕ ಮನೋಮೂರ್ತಿ ರೆಸ್ಟ್ರೂಮ್‍ಗೆ ಹೋಗಿ ಬಂದರು. ತಕ್ಷಣವೇ ಒಂದು ಟ್ಯೂನ್‍ ಕೊಟ್ಟರು. ಅದನ್ನು ಬೆಳೆಸಿ ಈ ಹಾಡು ...