नई दिल्ली, ಏಪ್ರಿಲ್ 14 -- ಯಾವುದೇ ಟೂರ್ನಿಯಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗುವ ಆಟಗಾರರಿಗೆ ಇಂತಿಷ್ಟು ಎಂದು ಬಹುಮಾನ ಮೊತ್ತ ನೀಡುವುದು ಸಾಮಾನ್ಯವಾಗಿದೆ. ಆದರೆ, ಪಾಕಿಸ್ತಾನ ಸೂಪರ್ ಲೀಗ್​ನಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದ ಕ್ರಿಕೆಟಿಗನಿಗೆ ಹೇರ್​​ ಡ್ರೈಯರ್​​ ನೀಡಲಾಗಿದೆ. ಹೌದು, ನೀವು ಕೇಳಿದ್ದು ನಿಜ. ಕೂದಲು ಒಣಗಿಸುವ ಯಂತ್ರ ನೀಡಲಾಗಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುತ್ತಿದೆ. ಇದು ಕರಾಚಿ ಕಿಂಗ್ಸ್ ಡ್ರೆಸ್ಸಿಂಗ್ ರೂಮ್​ನಲ್ಲಿ ಕೊಟ್ಟ ಪ್ರಶಸ್ತಿಯಾಗಿದೆ.

ಪಾಕಿಸ್ತಾನ ಸೂಪರ್ ಲೀಗ್ ಫ್ರಾಂಚೈಸಿಯಾದ ಕರಾಚಿ ಕಿಂಗ್ಸ್ ತನ್ನ ವಿದೇಶಿ ಆಟಗಾರ ಜೇಮ್ಸ್ ವಿನ್ಸ್​​ಗೆ 'ಅತ್ಯಂತ ವಿಶ್ವಾಸಾರ್ಹ ಆಟಗಾರ' ಹೆಸರಿನಲ್ಲಿ ಈ ಪ್ರಶಸ್ತಿಯನ್ನು ನೀಡಿದೆ. ಮುಲ್ತಾನ್ ಸುಲ್ತಾನ್ಸ್ ವಿರುದ್ಧದ ಋತುವಿನ ಮೊದಲ ಪಂದ್ಯದಲ್ಲಿ ಜೇಮ್ಸ್ ವಿನ್ಸ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 235 ರನ್​ಗಳ ಬೃಹತ್ ಗುರಿ ಬೆನ್ನಟ್ಟಿದ ಅವಧಿಯಲ್ಲಿ 43 ಎಸೆತಗಳಲ್ಲಿ 101 ರನ್ ಗಳಿಸಿದರು.

ಈ ವಿಡಿ...