ಭಾರತ, ಮಾರ್ಚ್ 3 -- ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರಲ್ಲಿ ಭಾರತ ತಂಡ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲೇ ಆಡುವ ಮೂಲಕ ಅಗತ್ಯ 'ಅನುಕೂಲ' ಮತ್ತು ಲಾಭ ಪಡೆಯುತ್ತಿದೆ ಎಂಬ ಟೀಕೆಗಳಿಗೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಪ್ರತಿಕ್ರಿಯಿಸಿದ್ದಾರೆ. ದುಬೈನಲ್ಲಿ ಕಂಡಿಷನ್ ಮತ್ತು ಪಿಚ್​​ಗಳ ಪರಸ್ಪರ ವ್ಯತಿರಿಕ್ತವಾಗಿದ್ದು, ಆರೋಪಗಳು ಸತ್ಯಕ್ಕೆ ದೂರವಾಗಿವೆ ಎಂದು ಹಿಟ್​ಮ್ಯಾನ್ ಅಭಿಪ್ರಾಯಪಟ್ಟಿದ್ದಾರೆ.

ಚಾಂಪಿಯನ್ಸ್​ ಟ್ರೋಫಿಗೆ ಪಾಕಿಸ್ತಾನ ಆತಿಥ್ಯದ ಹಕ್ಕುಗಳನ್ನು ಪಡೆದುಕೊಂಡಿದೆ. ಆದರೆ ಭದ್ರತಾ ದೃಷ್ಟಿಯಿಂದ ಭಾರತ ಸರ್ಕಾರ ಟೀಮ್ ಇಂಡಿಯಾವನ್ನು ಪಾಕಿಸ್ತಾನಕ್ಕೆ ಕಳುಹಿಸಲು ನಿರಾಕರಿಸಿತು. ಹಾಗಾಗಿ ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲಾಗುತ್ತಿದೆ. ಆತಿಥ್ಯ ಪಡೆದರೂ ಭಾರತ ಫೈನಲ್ ಕೂಡ ದುಬೈನಲ್ಲೇ ಆಡಲಿದೆ. ಆದರೆ ಇದಕ್ಕೆ ಸಕ್ರಿಯ ಕ್ರಿಕೆಟಿಗರು, ಮಾಜಿ ಕ್ರಿಕೆಟಿಗರು ಟೀಕಿಸಿದ್ದರು. ಐಸಿಸಿ ನಡೆಗೆ ಆಕ್ರೋಶ ವ್ಯಕ್ತವಾಗಿತ್ತು.

ಇದನ್ನೂ ಓದಿ: ರವೀಂದ್ರ ಜಡೇಜಾಗೆ ಎಚ್ಚರಿಕೆ ನೀಡದ ಅಂಪೈರ್ ವಿರುದ್ಧ ಕಾಮೆಂಟೇಟರ್ ಸೈಮನ್...