Bengaluru, ಏಪ್ರಿಲ್ 11 -- "ಇದು ನನ್ನ ಗ್ರೌಂಡ್‌, ಇದು ನನ್ನ ತವರು. ಈ ಮೈದಾನದ ಬಗ್ಗೆ ಬೇರೆಯವರಿಗಿಂತ ಚೆನ್ನಾಗಿ ನನಗೊತ್ತು". ಇದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್‌ ಪಂದ್ಯದಲ್ಲಿ ಆರ್‌ಸಿಬಿ ತಂಡವನ್ನು ಮಣಿಸಿದ ಬಳಿಕ ಕೆಎಲ್‌ ರಾಹುಲ್‌ ಹೇಳಿದ ಮಾತು. ಅವರ ಮಾತಿನಲ್ಲಿ ಕಿಚ್ಚಿತ್ತು. ತನ್ನ ವೃತ್ತಿಬದುಕಿನ ಆರಂಭದಿಂದಲೂ ಆಡಿ ಬೆಳೆದ ಮೈದಾನದಲ್ಲಿ ಪಂದ್ಯ ಗೆದ್ದ ಹೆಮ್ಮೆ ಇತ್ತು. ಎದುರಾಳಿ ತಂಡದ ವಿರುದ್ಧ ಅದರದ್ದೇ ತವರಿನಲ್ಲಿ ಏಕಾಂಗಿಯಾಗಿ ಆಡಿ ಗುರಿ ತಲುಪಿದ ಖುಷಿ ಇತ್ತು. ಬಹುಶಃ ಇಂಥಾ ಇನ್ನಿಂಗ್ಸ್‌ ಅನ್ನು ಕನ್ನಡಿಗ ಕೆಎಲ್‌ ರಾಹುಲ್ ಜೀವನದುದ್ದಕ್ಕೂ ಮರೆಯುವ ಸಾಧ್ಯತೆ ಇಲ್ಲ.

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ (ಏ.10) ನಡೆದ ಐಪಿಎಲ್ 2025ರ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ 6 ವಿಕೆಟ್‌ಗಳಿಂದ ಗೆದ್ದು ಬೀಗಿತು. ಇದು ತವರು ಮೈದಾನದಲ್ಲಿ ಆರ್‌ಸಿಬಿಗೆ ಸತತ ಎರಡನೇ ಸೋಲು. ಟೂರ್ನಿಯಲ್ಲಿ ತವರಿನ ಹೊರಗೆ...