ಭಾರತ, ಮಾರ್ಚ್ 19 -- ಕಲರ್ಸ್‌ ಕನ್ನಡದಲ್ಲಿ ಹಾರರ್‌ ಪ್ರೇಮಕಥೆಯ ʻನೂರು ಜನ್ಮಕೂʼ ಸೀರಿಯಲ್‌ ಕಳೆದ ವರ್ಷದ ಡಿಸೆಂಬರ್‌ 24ರಂದು ಪ್ರಸಾರ ಆರಂಭಿಸಿತ್ತು. ಅದಾದ ಮೇಲೆ ಡಿವೋರ್ಸ್‌ ಲಾಯರ್‌ ಮದುವೆ ಕಥೆಯಾದ ʻವಧುʼ ಮತ್ತು ʻಯಜಮಾನʼ ಧಾರಾವಾಹಿಗಳು ಬಿಗ್‌ ಬಾಸ್‌ ಮುಗಿಯುತ್ತಿದ್ದಂತೆ ಪ್ರಸಾರ ಆರಂಭಿಸಿದ್ದವು. ಈ ಸೀರಿಯಲ್‌ಗಳ ಆಗಮನದ ಹಿನ್ನೆಲೆಯಲ್ಲಿ ಕೆಲವು ಸೀರಿಯಲ್‌ಗಳು ಅಂತ್ಯವಾದವು, ಇನ್ನು ಕೆಲವು ಸಮಯದಲ್ಲಿ ಏರುಪೇರಾದವು.

ಕಲರ್ಸ್‌ ಕನ್ನಡದ ವಾಹಿನಿಯಲ್ಲಿ ಪ್ರಸಾರ ಆರಂಭಿಸಿರುವ ವಧು ಮತ್ತು ಯಜಮಾನ ಸೀರಿಯಲ್‌ಗಳಿಗೆ, ವೀಕ್ಷಕ ಪ್ರಭು ಮರುಳಾಗಲಿಲ್ಲ. ಅದಕ್ಕೂ ಮೊದಲು ಬಂದಿದ್ದ ನೂರು ಜನ್ಮಕೂ ಧಾರಾವಾಹಿಯೂ ನಿರಾಸೆ ಮೂಡಿಸಿತು. ನಿರೀಕ್ಷಿತ ಪ್ರಮಾಣದ ಟಿಆರ್‌ಪಿ ಈ ಸೀರಿಯಲ್‌ಗಳಿಗೆ ದಕ್ಕಲಿಲ್ಲ.

ಈ ನಡುವೆ ಪ್ರಸಾರದ ಸ್ಲಾಟ್‌ಗಳ ಬದಲಾವಣೆಯಿಂದಲೂ ಈ ಧಾರಾವಾಹಿಗಳು ಇದೀಗ ಅಡಕತ್ತರಿಯಲ್ಲಿವೆ ಎಂಬ ಮಾತೀಗ ಕಿರುತೆರೆ ಅಂಗಳದಲ್ಲಿ ಕೇಳಿಬರುತ್ತಿದೆ. ಅಂದರೆ, ಈಗಷ್ಟೇ ಪ್ರಸಾರ ಆರಂಭಿಸಿದ ಸೀರಿಯಲ್‌ಗಳ ಪೈಕಿ ಒಂದು ಸೀರಿಯಲ್‌ ಇನ್ನೇನ...