ಭಾರತ, ಜೂನ್ 22 -- ಮೈಸೂರು: 'ಯಾವುದೇ ಭಾಷೆಯನ್ನು ನಾವು ತಿರಸ್ಕರಿಸಬೇಕಿಲ್ಲ. ಅಥವಾ ಅಗೌರವ ತೋರಿಸಬೇಕಿಲ್ಲ. ಎಲ್ಲ ಭಾಷೆಗಳ ಸತ್ವ ಹೀರಿ ಬೆಳೆದಿದೆ ನಮ್ಮ ತಾಯ್ನುಡಿ. ಇತರ ಭಾಷೆಗಳನ್ನು ಸೊಸೆ ಎಂದುಕೊಳ್ಳೋಣ. ಕನ್ನಡವೇ ಸದಾ ನಮ್ಮ ತಾಯಿಯ ಸ್ಥಾನದಲ್ಲಿರಲಿ' ಎಂದು ಖ್ಯಾತ ಸಾಹಿತಿ, ಕವಿ ಟಿ.ಎನ್.ಶಿವಕುಮಾರ್ (ತನಾಶಿ) ಹೇಳಿದರು.

ನಗರದ ಗಾನಭಾರತಿ ಕಲಾ ಸಮುಚ್ಚಯದ ರಮಾ ಗೋವಿಂದ ಕಲಾವೇದಿಕೆಯಲ್ಲಿ ಭಾನುವಾರ 'ಡಿವಿಜಿ ಬಳಗ ಪ್ರತಿಷ್ಠಾನ'ದ ವತಿಯಿಂದ ನೀಡುವ ಪ್ರತಿಷ್ಠಿತ 'ಡಿವಿಜಿ ಪ್ರಶಸ್ತಿ 2025' ಸ್ವೀಕರಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಕನ್ನಡ ಸಂವಾದದ ಸೊಗಸು ಕಣ್ಮರೆಯಾಗುತ್ತಿದೆ. ಅನಗತ್ಯವಾದ ಇಂಗ್ಲಿಷ್ ಪದಗಳನ್ನು ಬಳಸುವ ಪ್ರವೃತ್ತಿ ಹೆಚ್ಚಾಗಿದೆ. ನಾವು ಕನ್ನಡಿಗರು, ನಾವೇ ಕನ್ನಡ ಬಳಸದಿದ್ದರೆ ಹೇಗೆ? ಇತರ ಭಾಷೆಗಳಿಗೆ ಗೌರವ, ಮರ್ಯಾದೆ ಕೊಡೋಣ. ಆದರೆ ಕನ್ನಡವನ್ನು ಅಮ್ಮನ ಸ್ಥಾನದಲ್ಲಿ ಉಳಿಸಿಕೊಳ್ಳೋಣ' ಎಂದರು.

ಕನ್ನಡದ ಹಲವು ಮಹತ್ವದ ಕವಿಗಳ ಕೊಡುಗೆ ಮೆಲುಕು ಹಾಕಿದ ಅವರು, 'ನೀವು ವೇದ, ಪುರಾಣ, ರಾಮಾಯಣ, ಮಹ...